ಮಂಗಳೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಮಂಗಳೂರು ಲೀಜನಿನ 2022 - 23 ರ ಸಾಲಿನ ಪದಗ್ರಹಣ ಸಮಾರಂಭ ಇತ್ತೀಚೆಗೆ ಮಂಗಳೂರಿನ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಜರುಗಿತು. 2022 - 23 ರ ಅಧ್ಯಕ್ಷರಾಗಿ ಆಯ್ಕೆಯಾಗಿರುವ Snr.PPF. ಕಿಶೋರ್ ಫೆರ್ನಾಂಡಿಸ್ ರವರಿಗೆ ಕಳೆದ ಸಾಲಿನ ಅಧ್ಯಕ್ಷರಾದ, ರಾಷ್ಟೀಯ ಪ್ರಶಸ್ತಿ ವಿಜೇತ Snr.PPF.ಹರಿಪ್ರಸಾದ್ ರವರು ಪ್ರಮಾಣ ವಚನ ಬೋಧಿಸಿದರು. 

ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಸೀನಿಯರ್ ಚೇಂಬರ್ ಅಧ್ಯಕ್ಷರಾದ Snr. PPF. ಡಾ.ಅರವಿಂದ ರಾವ್ ಕೇದಿಗೆಯವರು ಉಪಸ್ತಿತರಿದ್ದು ಶುಭ ಹಾರೈಸಿದರು. ಅತಿಥಿಗಳಾಗಿ ಭಾರತೀಯ ಜೂನಿಯರ್ ಚೇಂಬರಿನ ಜನರಲ್ ಲೀಗಲ್ ಕೌನ್ಸಿಲ್, ಜೇಸಿ ಸೆನೆಟರ್ ಸೌಜನ್ಯ ಹೆಗ್ಡೆ, ಭಾರತೀಯ ಭೂಸೇನೆಯ ನಿವೃತ್ತ ಹಿರಿಯ  ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಹೆಬ್ರಿ, ಅಂತರ್ರಾಷ್ಟ್ರೀಯ ಸೀನಿಯರ್ ಚೇಂಬರಿನ ನಿರ್ದೇಶಕರಾದ Snr. PPF. ಚಿತ್ರ ಕುಮಾರ್  ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಆರು ಮಂದಿ ಹೊಸ ಸದಸ್ಯರು ಮಂಗಳೂರು ಲೀಜನಿಗೆ ಸೇರ್ಪಡೆಗೊಂಡರು. 

ಸದಸ್ಯರಾದ Snr.Adv.ಅಶೋಕ್ ಎಂ.ಕೆ. ಮತ್ತು Snr.ವಿಕಾಸ್ ಶೆಟ್ಟಿ PPF ದೇಣಿಗೆಯಿತ್ತರು. ಅಧ್ಯಕ್ಷರಾದ Snr. PPF. ಹರಿಪ್ರಸಾದ್ ಅವರು ಸ್ವಾಗತಿಸಿ, ಹೊಸದಾಗಿ ಆಯ್ಕೆಯಾದ ಕಾರ್ಯದರ್ಶಿ Snr. PPF. ಫ್ಲೇವಿ ಡಿಮೆಲ್ಲೊ ವಂದಿಸಿದರು. Snr.ಪ್ರೀತಿ ರೈ,Snr.PPF. ಶಾಲಿನಿ ಪ್ರಶಾಂತ್,Snr.ಸುರೇಶ್ ಎಂ.ಎಸ್., Snr.ಲತಾ ಕಲ್ಲಡ್ಕ, Snr.ದತ್ತಾತ್ರೇಯ ಬಿ.,Snr.PPF.ಫ್ಲೇವಿ ಡಿಮೆಲ್ಲೊ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಉಡುಪಿ ಟೆಂಪಲ್ ಸಿಟಿ ಲೀಜನ್, ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್, ಉಳ್ಳಾಲ ರಾಣಿ ಅಬ್ಬಕ್ಕ ಲೀಜನ್, ಮಂಗಳೂರು ಜೇಸಿಸ್ ಮತ್ತಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.