ಮಂಗಳೂರು:- ಮಂಗಳೂರಿನ ನೂತನ ಮೇಯರ್ ಪ್ರೇಮಾನಂದ ಶೆಟ್ಟಿಯವರು ಕುಂಟಿಕಾನದ ಭಾರತ್ ಆಟೋ ವರ್ಕ್ಸ್ ಶೋ ರೂಮಿನಲ್ಲಿ ಈ ಮೂರನೇ ತಲೆಮಾರಿನ ಸುಧಾರಿತ ಸ್ವಿಫ್ಟ್ ಕಾರು ಬಿಡುಗಡೆ ಮಾಡಿದರು.
ಅನಂತರ ಮಾತನಾಡಿದ ಅವರ ಕೊರೋನಾ ಬಂದ ಬಳಿಕ ಮಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳ ಮಾರಾಟವಾಗಿದೆ ಎಂಬುದು ಟ್ರಾಫಿಕ್ ಮತ್ತು ತಜ್ಞರಿಂದ ತಿಳಿದು ಬಂದಿದೆ. ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಆರಂಭ ಹಂತದಲ್ಲಿ ಇದೆ. ಅದರ ಹೊರತಾಗಿ ರಸ್ತೆಗಳ ಉನ್ನತೀಕರಣ, ಆಟೋಮೇಟೆಡ್ ಪಾರ್ಕಿಂಗ್ ವ್ಯವಸ್ಥೆ ಇತ್ಯಾದಿಯ ಮೂಲಕ ನಗರದ ಸಂಚಾರಕ್ಕೆ ಸುಗಮ ಶಕ್ತಿ ನೀಡಲಾಗುತ್ತದೆ ಎಂದರು ಹಾಗೂ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಸ್ಥಳೀಯ ಕಾರ್ಪೊರೇಟರ್ ಮತ್ತು ಮಾಜೀ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ ಭಾರತ್ ಆಟೋದವರು ಅವರ ಹಿರಿಯರ ಕಾಲದಿಂದಲೂ ಉದ್ಯಮದಲ್ಲಿ ಸೇವೆಗೆ ಮಹತ್ವ ನೀಡಿದವರು. ಆದ್ದರಿಂದ ಈ ಉದ್ಯಮ ವೃದ್ಧಿಸಿದೆ ಅವರಿಗೆ ಒಳಿತಾಗಲಿ ಎಂದರು.
ಸಂಸ್ಥೆಯ ಮಹೇಂದ್ರ ಅವರು ಈ ಹೊಸ ಕಾರಿನ ವಿಶೇಷತೆ ವಿವರಿಸಿದರು. ಇದು ಸಿಗ್ನಲ್ ಬಳಿ ಸುಲಭದಲ್ಲಿ ನಿಂತು ಸುಲಭದಲ್ಲಿ ತಾನೇ ಚಾಲೂ ಆಗಿ ಇಂಧನ ಉಳಿತಾಯ ಮಾಡುತ್ತದೆ. ಇದು ಸಂಪೂರ್ಣ ಸ್ವಯಂಚಲಿ ಲಾಕಿಂಗ್ ಸಿಸ್ಟಮ್ ಹೊಂದಿದೆ. ನೀವು ಬಯಸದೆ ಹಿಮ್ಮುಖ ಚಲಿಸದು. ಮಾಮೂಲು ಪೆಟ್ರೋಲಿನಲ್ಲಿ ಲೀಟರಿಗೆ 27 ಕಿಮಿ ಓಡುತ್ತದೆ. ಹಿಂದಿನ ಸ್ವಿಫ್ಟ್ ಗಿಂತ ಇದರಲ್ಲಿ 14 ಸಂಗತಿಗಳು ಇರುವುದನ್ನೂ ಅವರು ಹೇಳಿದರು.
ಭಾರತ್ ಆಟೋ ಮಂಗಳೂರಿನಲ್ಲಿ 7, ಉಡುಪಿಯಲ್ಲಿ 5 ಎಂದು ಜಿಲ್ಲೆಯಲ್ಲಿ 50 ಮತ್ತು ಉ. ಕ.ದಲ್ಲಿ 5 ಔಟ್ ಲೆಟ್ ಗಳನ್ನು ಹೊಂದಿದೆ. ಈಗ ಮಾರುತಿ ಮಾತ್ರ ಎಸ್ ಎನ್ ಜಿ ಇಂಧನ ವ್ಯವಸ್ಥೆ ಹೊಂದಿದೆ. ಇದನ್ನು ಪಡೆದರೆ ಕಾರು ಕೂಡ ಒಂದು ಲೀಟರಿಗೆ 65 ಕಿಮೀ ಓಡುತ್ತದೆ ಎಂಬ ವಿವರ ನೀಡಿದರು.
ಆರಂಭದಲ್ಲಿ ನಿರ್ವಹಣಾ ನಿರ್ದೇಶಕ ಸುಧೀರ್ ಪೈ ಸ್ವಾಗತಿಸಿದರು. ಇನ್ನೂ ಒಬ್ಬ ಎಂಡಿ ಸುಬ್ರಾಯ ಪೈ ಹಾಗೂ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ ಮೊದಲಾದವರು ಹಾಜರಿದ್ದರು.