ಮುಂಬಯಿ, ಆ.15: ಮಂಗಳೂರು ಇಲ್ಲಿನ ಕುಪ್ಪೆಪದವು ಮಜಲು ನಿವಾಸಿ ಶ್ರೀಮತಿ ವಸಂತಿ ಕೆ. ಶೆಟ್ಟಿ (70.) ಅವರು ಕಳೆದ (ಆ.13) ರವಿವಾರ ಮುಂಬಯಿ ಕಾಂದಿವಲಿ ಪೂರ್ವದ ಲೋಖಂಡ್‍ವಾಲಾ ಟೌನ್‍ಶಿಪ್ ಇಲ್ಲಿನ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ಮೂಲ್ಕಿ ಬಪ್ಪನಾಡುಗುತ್ತು ದಿ| ಎನ್. ಕರಿಯಣ್ಣ ಶೆಟ್ಟಿ ಅವರ ಧರ್ಮಪತ್ನಿಯಾಗಿದ್ದು, ಸುಪುತ್ರ, ಸುಪುತ್ರಿ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.