ಲೊರೆಟ್ಟೊ : ನೂತನವಾಗಿ ಆರಂಭಗೊಂಡ ಬೆಂಗಳೂರಿನ ಸಂತ ಜೋಸೆಫ್ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ವಂ|ರೆ| ಡಾ| ವಿಕ್ಟರ್ ಲೋಬೊ ಎಸ್. ಜೆ ಇವರು ಅಧಿಕಾರ ವಹಿಸಿಕೊಂಡರು. ಅವರನ್ನು ಲೊರೆಟ್ಟೊ ಚರ್ಚ್ ಪಾಲಾನಾ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಇದು ಭಾರತದ ಪ್ರಥಮ ಅನುದಾನಿತ ವಿಶ್ವವಿದ್ಯಾನಿಲಯ, ಇದರ ಹಿಂದೆ ಗುರುಗಳ ಕಠಿಣ ಶ್ರಮ ,ಧ್ನಡತೆ ,ವಿಶ್ವಾಸ ಹಾಗೂ ಹಲವು ವಿಚಾರಗಳನ್ನು ಕೊಂಡಾಡಿದರು.ಇಂತಹ ವಿಶ್ವವಿದ್ಯಾಲಯದ ಉನ್ನತ ಹುದ್ದೆ ಅಲಂಕರಿಸಿದ ನಮ್ಮ ಚರ್ಚ್ ಗೆ ಹೆಮ್ಮೆಯ ಸಂಗತಿ ಎಂದು ಧರ್ಮಗುರುಗಳು ಉಪ ಕುಲಪತಿಯನ್ನು ಅಭಿನಂದನಾ ಸಮಯದಲ್ಲಿ ತಿಳಿಸಿದರು. ಚರ್ಚ್ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ವಂ. ಜೇಸನ್ ಮೊನಿಸ್, ಚರ್ಚ್ ಪಾಲಾನಾ ಮಂಡಳಿಯ ಉಪಾಧ್ಯಕ್ಷರಾದ ರೋಯ್ ಕಾರ್ಲೊ, ಕಾರ್ಯದರ್ಶಿಯಾದ ಆಲ್ವಿನ್ ಪಿಂಟೊ ಉಪಸ್ಥಿತರಿದ್ದರು.