ಬಜ್ಪೆ ಠಾಣಾಧಿಕಾರಿ ಮತ್ತು ಪೋಲೀಸು ಸಿಬ್ಬಂದಿ ಕಟೀಲಿನ ಹಿಂದೂ ಕಾರ್ಯಕರ್ತರನ್ನು ಅಮಾನುಷವಾಗಿ ಹಲ್ಲೆ ಮಾಡಿ, ಗಾಯಗೊಳಿಸಿದ್ದಾರೆ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಕೂಡಲೆ ಬಜ್ಪೆ ಠಾಣಾಧಿಕಾರಿಯನ್ನು ಬಂಧಿಸಲು ವಿಶ್ವ ಹಿಂದೂ ಪರಿಷತ್ ಒತ್ತಾಯಿಸುತ್ತದೆ ಎಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿಹಿಂಪ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಧರ್ಮೇಂದ್ರ ಅವರು ಹೇಳಿದರು.
ಪೋಲೀಸರು ಜನಸ್ನೇಹಿ ಆಗಿರಬೇಕು ಎಂದು ಕಮಿಶನರ್ ಶಶಿಕುಮಾರ್ ಹೇಳಿದ್ದಾರೆ. ಈಗ ಬಜ್ಪೆಯ ಪೋಲೀಸರನ್ನು ಅಮಾನತು ಮಾಡಿ ಏನು ಪ್ರಯೋಜನ? ಹಲ್ಲೆಗೊಳಗಾದವರಿಗೆ ಇದರಿಂದ ನ್ಯಾಯ ಸಿಗುತ್ತದೆಯೇ? ಸಾಮಾನ್ಯ ಒಬ್ಬ ತಪ್ಪು ಮಾಡಿದರೆ ನೀವು ಹೇಗೆ ನಡೆಸಿಕೊಳ್ಳುತ್ತೀರಿ? ಕೋರ್ಟಿನಲ್ಲಿ ವಿಚಾರಣೆ ವೇಳೆ ಸರಿಯಾಗಿ ನೋಡಿಕೊಂಡಿದ್ದಾರೆಯೇ ಎಂದು ಕೇಳುತ್ತಾರೆ. ಈ ಬಗೆಗೆ ಸುಪ್ರೀಂ ಕೋರ್ಟ್ ಆದೇಶವೂ ಇದೆ. ಬಜ್ಪೆ ಪೋಲೀಸರ ಮೇಲೆ ಕಂಟೆಂಪ್ಟ್ ಆಫ್ ಕೋರ್ಟ್ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂದು ಧರ್ಮೇಂದ್ರ ಪ್ರಶ್ನಿಸಿದರು.
ಕಟೀಲು ದೇವಸ್ಥಾನದಲ್ಲಿ ಅನ್ಯ ಮತೀಯರಿಗೆ ವ್ಯಾಪಾರ ಅವಕಾಶ ಇಲ್ಲ ಎಂದು ಸ್ಪಷ್ಟ ಇದೆ. ಇದರ ನಡುವೆ ಮಾಜೀ ಶಾಸಕ ಬಾವಾ ಅವರು ಅದನ್ನು ಪ್ರಶ್ನಿಸುವುದು ಎಷ್ಟು ಸರಿ? ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಬಜ್ಪೆ ಪೋಲೀಸು ಮತಾಂಧರ ಮೇಲೆ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಕೋರ್ಟು ಮೆಟ್ಟಿಲು ಹತ್ತತ್ತೇವೆ. ಇನ್ಸ್‌ಪೆಕ್ಟರ್ ಸಂದೇಶ್, ಸಿಬ್ಬಂದಿಗಳಾದ ಇಮ್ತಿಯಾಜ್, ಮುಸಾಫಿರ್, ರಾಜೇಶ್ ಮೊದಲಾದವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಧರ್ಮೇಂದ್ರ ಹೇಳಿದರು.
ಮಹೇಶ್ ಎಂಬ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಲ್ಲದೆ ಆತನ ತಾಯಿ ಮತ್ತು ತಂಗಿಯನ್ನು ಕೆಟ್ಟದಾಗಿ ಮಾತನಾಡಿದ ಪೋಲೀಸರಿಗೆ ಸಂಸ್ಕಾರ ಗೊತ್ತಿಲ್ಲವೆ? ಮಹೇಶ್ ತಪ್ಪು ಮಾಡಿದ್ದರೆ ಕ್ರಮ ಪ್ರಕಾರ ಪ್ರಕರಣ ದಾಖಲಿಸದೆ ಪೋಲೀಸರು ಹೊಡೆಯಲು ಬಡಿಯಲು ಅವಕಾಶ ಎಲ್ಲಿದೆ? ಧರ್ಮೇಂದ್ರ ಹಲವು ರೀತಿ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾ ಅಧ್ಯಕ್ಷ ಪ್ರಮೋದ್ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು.
ಇಂದೇ ಕಮಿಶನರ್‌ರಿಗೆ ಮನವಿ ಸಲ್ಲಿಸಿ, ಆಮೇಲೆ ನ್ಯಾಯಾಲಯಕ್ಕೆ ಒಂದು ಅರ್ಜಿ ಸಲ್ಲಿಸಲಿವೆ ಎಂದೂ ಅವರು ಹೇಳಿದರು.