ಮಂಗಳೂರು ಡಿ.16: ಇದೇ ಡಿಸೆಂಬರ್ 21ರಂದು ವೀರ ರಾಣಿ ಅಬ್ಬಕ್ಜ ಉತ್ಸವ ರಜತ ಸಂಭ್ರಮ ಕಾರ್ಯಕ್ರಮವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಉಳ್ಳಾಲ ನಗರ ಸಭೆಯ ಸಹಯೋಗದಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಮೂಲಕ ಸಂಪನ್ನಗೊಳ್ಳಲಿದೆ ಎಂದು ತುಳು ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲಸಾರ್ ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

ತುಳು ಅಕಾಡೆಮಿಯು ಈ ಮಣ್ಣಿನ ಸ್ವಾತಂತ್ರ್ಯ ಕಿಡಿಗಳನ್ನು ಪರಿಚಯಿಸುತ್ತ ಬಂದಿದೆ. ಕೊರೋನಾ ತಡೆ ಇದ್ದಾಗಲೂ ಅಕಾಡೆಮಿ ಇಂಥ ಪ್ರಯತ್ನ ನಡೆಸುತ್ತಲೇ ಬಂದಿದೆ. ಅಬ್ಬಕ್ಕ ಮೊದಲ ಸ್ವಾತಂತ್ರ್ಯ ಹೋರಾಟಗಾತಿ ಆಗಿದ್ದು, ಉಳ್ಳಾಲದ ಮಹಾತ್ಮಾ ಗಾಂಧಿ ರಂಗ ಮಂದಿರದಲ್ಲಿ ನಡೆಯಲಿದೆ. ಅದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರತಿಯೊಂದು ನಡೆಯುತ್ತದೆ. ಈ ಬಾರಿಯ ಅಬ್ಬಕ್ಕ ಪ್ರಶಸ್ತಿಯನ್ನು ಚಂದ್ರಕಲಾ ನಂದಾವರ ಮತ್ತು ರೋಹಿಣಿ ಅವರಿಗೆ ಘೋಷಣೆ ಆಗಿದ್ದು, ಅದನ್ನು ಅಂದು ಪ್ರಧಾನ ಮಾಡಲಾಗುವುದು ಎಂದು ಕತ್ತಲಸಾರ್ ಹೇಳಿದರು.

ಮಾಜೀ ಶಾಸಕ ಜಯರಾಮ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ  ಮಾತನಾಡಿ 1997ರಲ್ಲಿ ಅಬ್ಬಕ್ಕ ಉತ್ಸವ ತುಳು ಅಕಾಡೆಮಿಯ ಸಹಯೋಗದಿಂದ ಆರಂಭವಾಗಿತ್ತು. ನಾನಾ ಅಡೆತಡೆಗಳ ನಡುವೆ ಇದು 25ನೇ ವರುಷದ ರಜತ ಸಂಭ್ರಮ ತಲುಪಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೈದರ್ ಪರ್ತಿಪ್ಪಾಡಿ, ದಿನಕರ ಉಳ್ಳಾಲ್, ಧನಲಕ್ಷ್ಮಿ ಗಟ್ಟಿ, ನಾಗೇಶ್ ಕುಲಾಲ್, ಅಲಿಯಬ್ಬ, ಚೇತನ್ ಪೂಜಾರಿ, ಆನಂದ್ ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು.