ಮೂಡಬಿದ್ರೆ : ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಸಂಘಟನಾ ಮಂಗಳೂರು,ಶ್ರೀ ಧವಲಾ ಮಹಾ ವಿದ್ಯಾಲಯ ಮೂಡಬಿದ್ರೆ,ರಾಷ್ಟ್ರೀಯ ಸೇವಾ ಯೋಜನೆ, ಹಾಗೂ ಶ್ರೀದೇವಿ ಸ್ಪೋರ್ಟ್ಸ್ ಕ್ಲಬ್ ಮೂಡಬಿದ್ರೆ ಇದರ ಆಶ್ರಯದಲ್ಲಿ ಜಲ ಶಕ್ತಿ ಅಭಿಯಾನ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 28.01.2022 ರಂದು  ಶ್ರೀ ಧವಲಾ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ  ಪ್ರಾಂಶುಪಾಲರಾದ  ಡಾ. ಸುದರ್ಶನ್ ಕುಮಾರ್ ರವರು ವಯಿಸಿದ್ದರು.ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಎನ್. ಐ. ಟಿ .ಕೆ.ನ ನಿವೃತ್ತ  ಪ್ರೊಫೆಸರ್ ರಾದ ಎಂ. ಜಿ. ಮಯ್ಯ ರವರು ಜಲ ಶಕ್ತಿ ಮತ್ತು ನೀರಿನ ಸಂರಕ್ಷಣೆ ಮತ್ತು ಜಾಗೃತಿ ಬಗ್ಗೆ ಮಾಹಿತಿ ನೀಡಿದರು.ಹಾಗೇನೇ ನೆಹರು ಯುವ ಕೇಂದ್ರ ಮಂಗಳೂರು ಇದರ ಮಂಗಳೂರು ತಾಲ್ಲೂಕು ಸಂಯೋಜಕಾರದ ಕುಮಾರ್ ನಾಗರಾಜ್ ಹೆಚ್. ಜಿ. ಇವರು ಕಾರ್ಯಕ್ರಮದ ಕುರಿತು ಕಿರು ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಮನಃಶಾಸ್ತ್ರಜ್ಞರಾದ ಶ್ರೀಮತಿ ಸುಶ್ಮಿತಾ ಬಿ.ಆರ್. ಅವರು ನೀರಿನ ಮೌಲ್ಯದ ಬಗ್ಗೆ ತಿಳಿಸಿದರು.. ಹಾಗೇನೇ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಶ್ರೀಸಂತೋಷ,ಮತ್ತು ಶ್ರೀಮತಿ ಯಶೋಧ ಕ್ಲಬ್ ನ ಸದಸ್ಯರಾದ ಪ್ರಶಾಂತ್, ಮತ್ತು ಕಿಶೋರ್ ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮತ್ತು ಕಾರ್ಯಕ್ರಮದ ನಿರೂಪನೆ, ವಂದನೆ, ಸ್ವಾಗತ ಭಾಷಣವನ್ನು ಕಾಲೇಜಿನ ವಿದ್ಯಾರ್ಥಿಗಳು ನೆರವೇರಿ ಸಿದರು. ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಯಗೊಂಡಿತು.