ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ 2021-22 ರ ಸಾಲಿನ ನೂತ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಮತ್ತು  ಸದಸ್ಯರಿಗೆ ಒಂದು ದಿನದ ಪುನ:ಶ್ಚೇತನ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ಕ್ಷೇಮಪಾಲಕರಾದ ಪ್ರೊ. ಚಂದ್ರಶೇಖರ್ ಮತ್ತು ಭಾರತಿ ರೈ ಅವರು ತರಬೇತಿ ನೀಡಿದರು.  ವಿದ್ಯಾರ್ಥಿ ಸಂಘದಅಗತ್ಯ, ಪದಾಧಿಕಾರಿಗಳ ಮತ್ತು ಸದಸ್ಯರ ಕರ್ತವ್ಯ ಮತ್ತು  ಹೊಣೆಗಾರಿಕೆಯ ಕುರಿತು ವಿವರಿಸಿದರು. 

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು ವಿದ್ಯಾರ್ಥಿ ಸಂಘ ಕ್ರಿಯಾ ಶೀಲವಾಗಿರಬೇಕಾದ ಅಗತ್ಯವಿದೆ,  ಅಪಾದನೆ ಮಾಡುತ್ತ ಸಮಸ್ಯೆಯನ್ನು ಹುಟ್ಟು ಹಾಕುವ ಬದಲಿಗೆ, ಸಮಸ್ಯೆಗಳ ಪರಿಹಾರಕ್ಕೆ ವಿದ್ಯಾರ್ಥಿ ಸಂಘ ತೊಡಗಬೇಕೆಂದು ಹೇಳಿದರು. ನಾಯಕ ತ್ವತನ್ನಿಂದ ತಾನೇ ಬರದು. ನಾಯಕತ್ವದ ಗುಣವನ್ನು ಪ್ರತಿಯೊಬ್ಬನೂ ಮನ:ಪೂರ್ವಕವಾಗಿ ಬೆಳೆಸಿಕೊಂಡರೆ ಮಾತ್ರ ನಾಯಕತ್ವ ರೂಪುಗೊಳ್ಳುತ್ತದೆ ಮತ್ತು ಇದು ಬದುಕಿನಲ್ಲಿಯೂ ಸಾಧನೆಗೆ ಪ್ರೇರಣೆ ನೀಡುತ್ತದೆಂದು ವಂ| ಡಾ| ಪ್ರಕಾಶ್ ಮೊಂತೆರೋ  ವಿವರಿಸಿದರು. 

ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮಿತ್ ಅರನ್ಹಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಖ್ಯಾತ್ ವಂದಿಸಿದರು. ಜತೆ ಕಾರ್ಯದರ್ಶಿ ಮಹಾಲಸ ಪೈ ನಿರ್ವಹಿಸಿದರು. ಹಲೆನ್, ಲಾವಣ್ಯ ಮತ್ತು ಸಮೃದ್ಧಿ ಪ್ರಾರ್ಥಿಸಿದರು.