ಮುಂಬಯಿ, ಮಾ.20: ಉಡುಪಿ ಜಿಲ್ಲೆಯ ಪರೀಕ ಚೆನ್ನಿಬೆಟ್ಟು ಶತಾಯುಷಿ ಸರಸ್ವತಿ ಶ್ರೀಮತಿ  ಸರಸ್ವತಿ ಸೂರಪ್ಪ ಹೆಗ್ಡೆ (102) ಅವರು ಇಂದಿಲ್ಲಿ ಗುರುವಾರ (ಮಾ.19)ರಂದು  ನಿಧನರಾದರು.  

ಮೃತರು ಸುಪುತ್ರ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಮತ್ತು ಯುಎಇ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಸಹಿತ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮ ಕ್ಕಳು, ಮರಿ ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಯುಎಇ ಬಂಟರ ಸಂಘ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ ಮತ್ತು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.