ಆಸೆಯೆಂಬ ಕೆಡು ಕೆಂಡವು
ಪ್ರವೇಶಿಸಿದೊಡೆ ಮನವ
ತೃಪ್ತಿಯೆಂಬ ಮಂಜು
ತಾನಾಗಿಯೇ ಕರಗುವುದು ಮಾನವ…
ಅಂಜುವೆನು ನೆನೆದೊಡೆ ಮುಂದಿನ
ನಿನ್ನ ಶಾಂತಿಹೀನ ಜೀವನವ
ಅಯ್ಯೋ ಅರಿವೆಯೆಂದು ನೀ
ನೈಜ ಬಾಳಿನ ಸಾರ್ವ…
ಬಯಸಿ-ಬಯಸದೆಲೆ ಪಡೆದಿಹ
ಮನುಜ ಆಸೆಯೆಂಬ ಶಾಪವ
ಆಹ್ವಾನಿಸಿ ಮೃತ್ಯುವಿಗೆ ಕಳೆದುಕೊಳ್ಳುವ
ತನ್ನ ಅತ್ಯಮೂಲ್ಯ ಜೀವವ…
-By ಮಾಗಿದ ಮನಸ್ಸು