ಕೊರೊನ ಕೊರೊನ
ಏನಿದು ನಿನ್ನ ಪುರಾಣ
ನೀ ಹುಟ್ಟಿರುವ ದೇಶ ಚೀನಾ
ಬಲೆ ಹಿಡಿದಿ ಮನುಷ್ಯನ
ನೀನು ಮಾಡಿದ್ದು ಸರಿನಾ?
ಯಾರೊ ತಿಂದರೆಂದು ಇಲಿ, ಹಾವು, ಶ್ವಾನ
ನೀನು ಶಿಕ್ಷಿಸಿ ಬಿಟ್ಟಿ ಇಡಿ ಜಗತ್ತನ್ನ
ಮಾನವ ಕುಲವೆಲ್ಲ ಒಂದೇ ಎಂಬ ಭಯಾನ?
ಹಾಗಾದರೆ ಯಾಕೆ ಬಿಡಲಿಲ್ಲ, ನೀ ಮೂಕ ಪ್ರಾಣಿಗಳನ
ಅಂತ್ಯ ಕಾಲಕ್ಕೆ ಬಂದಿತೇ ಈ ಮನುಷ್ಯನ ಜೀವನ?
ದೇಶದ ಆರ್ಥಿಕ ಪರಿಸ್ಥಿತಿ ಪತನ
ಹಿಂಡುತ್ತಿದ್ದಿ ನೀ ನಮ್ಮೆಲ್ಲರ ಪ್ರಾಣ
ಇಡೀ ವಿಶ್ವಕ್ಕೆ ಕೊರೊನ ಎಂದರೆ ಕಂಪನ
ನೀ ಶುರು ಮಾಡಿಬಿಟ್ಟೆ ನಿನ್ನ ರುದ್ರ ನರ್ತನ
ನಿರ್ನಾಮ ಮಾಡು ನಿನ್ನ ಹಾವಳಿನ
ಎಕೆಂದರೆ, ನಿದ್ದೆ ಬಾರದ ರಾತ್ರಿಯಲ್ಲಿ ಬರೀ ನಿನ್ನದೇ ಧ್ಯಾನ
ಅಪ್ಪಿ ತಪ್ಪಿ ಬಂದ ನಿದ್ದೆಯಲ್ಲು ಬರಿ ನಿನ್ನದೇ ಕವನ...
-By ವಿಜಯಲಕ್ಷ್ಮಿ. ಆರ್. ಕಾಮತ್ ಮುನಿಯಾಲು