ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿಯಲ್ಲಿ 2020-21 ರ ಸಾಲಿನಿಂದ 4 ವರ್ಷಗಳ ತಲಾ 50 ವಿದ್ಯಾರ್ಥಿ ಸಂಖ್ಯೆಯೊoದಿಗೆ ಇಂಟಿಗ್ರೇಟೆಡ್ ಬಿ.ಎ ಬಿ.ಎಡ್ ಹಾಗೂ ಬಿ.ಎಸ್ಸಿ ಬಿ.ಎಡ್ ಕೋರ್ಸುಗಳನ್ನು ಆರಂಭಿಸಲು ಕರ್ನಾಟಕ ಸರಕಾರದಿಂದ ಆಯ್ಕೆಯಾಗಿರುತ್ತದೆ.

    ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ 3 ಸರ್ಕಾರಿ ಕಾಲೇಜುಗಳು ಆಯ್ಕೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ನಮ್ಮ ಕಾಲೇಜಿನಲ್ಲಿ ಮಾತ್ರ ಈ ಕೊರ್ಸುನ್ನು ಆರಂಭಿಸಲು ಅನುಮತಿ ಸಿಕ್ಕಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣೆಕ ವರ್ಷದ ಉಳಿತಾಯ ಜೊತೆಗೆ ಬಿ.ಎಡ್ ಕೋರ್ಸಿನಿಂದ ಉದ್ಯೋಗರಂಗಕ್ಕೆ ಕಾಲಿಡಲು ಅನುಕೂಲವಾಗಿರುತ್ತದೆ ಎಂದು ಕಾಲೇಜಿನ  ಪ್ರಾಂಶುಪಾಲರಾದ   ಬಾಲಕೃಷ್ಣ ಎಸ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.