ಉಡುಪಿ:ಕೊಲ್ಲೂರು ಗ್ರಾಮದ ಕಲ್ಯಾಣೆಗುಡ್ಡೆಯ ದೀಪಾ (23 ವರ್ಷ) ಎಂಬ ಮಹಿಳೆ,  ಜೂನ್ 12 ರಂದು  ಬೆಳಗ್ಗೆ 9 ಘಂಟೆಗೆ ಮನೆಯಲ್ಲಿ ತನ್ನ 3 ವರ್ಷದ ಮಗುವನ್ನು ಬಿಟ್ಟು ಕಾಣೆಯಾಗಿದ್ದು , ಎಣ್ಣೆ ಕಪ್ಪು ಮೈ ಬಣ್ಣ , 5 ಅಡಿ 3 ಇಂಚು ದುಂಡು ಮುಖ ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಲಂಬಾಣೆ, ಮಲೆಯಾಳಿ ಭಾಷೆ ಮಾತನಾಡುತ್ತಾರೆ.  ಇವರ ಪತ್ತೆಯಾದಲ್ಲಿ ಕೊಲ್ಲೂರು  ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಕೊಲ್ಲೂರು ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.