ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆಯ ವ್ಯವಸ್ಥಿತ ಪ್ರಖ್ಯಾತ ಗಣೇಶೋತ್ಸವ ಸಮಾಜ ಮಂದಿರದಲ್ಲಿ ಆಗಸ್ಟ್ 27 ರಿಂದ 31 ರ ತನಕ ನಡೆಯಲಿದೆ. ನಿನ್ನೆ ಆಗಸ್ಟ್ 25 ರಂದು ನಡೆದ ಜಾನಪದ ನೃತ್ಯ ಸ್ಪರ್ಧೆಯ ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದವರು, ದ್ವಿತೀಯ ಸ್ಥಾನವನ್ನು ರೋಟರಿ ಸಂಸ್ಥೆಯ ಮೋಹನ್ ಮತ್ತು ತಂಡ, ಮತ್ತು ಬಂಟರ ಸಂಘದ ಮಹಿಳಾ ಘಟಕ, ತೃತೀಯ ಸ್ಥಾನವನ್ನು ಗಾಣಿಗ ಸಂಘವು ಪಡೆದುಕೊಂಡಿರುತ್ತದೆ.
ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆಳ್ವಾಸ್ನ ಗುರುಪ್ರಸಾದ್, ದ್ವಿತೀಯ ಸ್ಥಾನವನ್ನು ಆಳ್ವಸ್ನ ದೇವಿಕ, ತೃತೀಯ ಸ್ಥಾನವನ್ನು ಧವಳಾದ ಮಲ್ಲಿಕಾ ರಾವ್, ಸಮಾಧಾನಕರ ಬಹುಮಾನವನ್ನು ಮಹಾವೀರ ಕಾಲೇಜು, ನಿಶಾ ಜೈನ್ ತಂಡ, ಸಮೀಕ್ಷಾ ತಂಡ, ಆಕಾಶ್ ತಂಡಗಳು ಪಡೆದಿರುತ್ತವೆ.
ಹೈಸ್ಕೂಲು ವಿಭಾಗದಲ್ಲಿ ಆಳ್ವಾಸ್ನ ಕಾವ್ಯ ಮತ್ತು ತಂಡ ಪ್ರಥಮ ಸ್ಥಾನವನ್ನು, ದ್ವಿತೀಯ ಸ್ಥಾನವನ್ನು ರೋಟೆರಿಯ ಸಂಜನಾ ಮತ್ತು ತಂಡ, ತೃತೀಯ ಸ್ಥಾನವನ್ನು ಆಳ್ವಸ್ನ ಶ್ರೀನಿವಾಸ ಮತ್ತು ತಂಡ, ಸಮಾಧಾನಕರ ಬಹುಮಾನವನ್ನು ಆಳ್ವಾಸ್ ಪ್ರೌಢಶಾಲೆ, ಆಳ್ವಾಸ್ ಸೆಂಟ್ರಲ್ ಶಾಲೆ ತಂಡಗಳು ಪಡೆದಿರುತ್ತವೆ.
ಯತಿರಾಜ್ ಜೈನ್ ಸ್ಪರ್ಧೆಯ ನಿರ್ವಾಹಕರಾಗಿದ್ದರು ನಿರ್ಣಾಯಕರುಗಳಾಗಿ ಕೃತಿಕ, ಸಾನ್ವಿ, ಚೈತ್ರ, ಬಾಳಿಕಾ, ಗುರುಪ್ರಸಾದ್, ಹಾಗೂ ಪೂರ್ಣಿಮಾ ಅವರು ಸಹಕರಿಸಿದರು.