ಉಡುಪಿ: ಪ್ರತಿ ವರ್ಷದಂತೆ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದು, ಆದರೆ ಪ್ರಸ್ತುತ ಸಾಲಿನಲ್ಲಿ ಕೋವಿಡ್-19 ಮಹಾಮಾರಿ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭಗಳನ್ನು ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸಿರುವುದರಿಂದ , ಈ ವರ್ಷ “YOGA FROM HOME” ಘೋಷ ವಾಕ್ಯದೊಂದಿಗೆ ಮನೆಯಿಂದಲೆ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯೋಗ ದಿನಾಚರಣೆಯನ್ನು ಆಚರಿಸಲು ಭಾರತ ಸರ್ಕಾರದ ಆಯುಷ ಮಂತ್ರಾಲಯ ಸೂಚಿಸಿದೆ.
ಆದುದರಿಂದ ಸಾರ್ವಜನಿಕರು ಮನೆಯಲ್ಲೇ ಯೋಗಭ್ಯಾಸ ನಡೆಸಿ ಸದರಿ ಫೋಟೊಗಳನ್ನು ಜಿಲ್ಲಾ ಆಯುಷ್ ಕಛೇರಿಯ ಇ-ಮೇಲ್ ವಿಳಾಸ daoudupi09@gmail.com , ಗೆ ಅಥವಾ ಫೋನ್: 8621709538 ಇದಕ್ಕೆ ಕಳುಹಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಲಕಾನಂದರಾವ್ ತಿಳಿಸಿದ್ದಾರೆ.