ಉಡುಪಿ: ಕೋವಿಡ್-19ರ ತಡೆಗೆ ಲಾಕ್‍ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಕಾರ್ಮಿಕರಿಗೆ ಆರ್ಥಿಕವಾಗಿ ನಷ್ಟವಾಗಿರುವುದನ್ನು ಗಮನಿಸಿ, ಸರ್ಕಾರದ ವತಿಯಿಂದ ಹಲವು ವರ್ಗದವರಿಗೆ ಪರಿಹಾರಧನವನ್ನು ಘೋಷಿಸಲಾಗಿದೆ.
ಅದರಲ್ಲಿ ಅಗಸರು ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಒಂದು ಬಾರಿ ಪರಿಹಾರವಾಗಿ ರೂ.5,000/- ಗಳ ನೆರವನ್ನು ನೀಡಲಾಗುವುದು.
ಅಗಸ/ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಫಲಾನುಭವಿಗಳು ಆನ್‍ಲೈನ್ ಮೂಲಕ ಸೇವಾ ಸಿಂಧು https://sevasindhu.Karnataka. Gov.in/ ಪೋರ್ಟ್‍ಲ್‍ನಲ್ಲಿಅರ್ಜಿ ಸಲ್ಲಿಸಿದಲ್ಲಿ, ಅವುಗಳನ್ನು ಪರಶೀಲಿಸಿ ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖೈಗೆ ಲಿಂಕ್‍ಆಗಿರುವ ಬ್ಯಾಂಕ್‍ಖಾತೆಗೆಡಿ.ಬಿ.ಟಿ ಮೂಲಕ ಪರಿಹಾರವನ್ನು ವರ್ಗಾಯಿಸಲಾಗುವುದು.
ಷರತ್ತುಗಳು: ವಯೋಮಿತಿ: 18 ರಿಂದ 65 ವರ್ಷಗಳು ಕುಟುಂಬದಲ್ಲಿಒಬ್ಬರಿಗೆ ಮಾತ್ರ. ಕರ್ನಾಟಕದಲ್ಲಿ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿತೊಡಗಿರುವ ವಲಸೆ ಕಾರ್ಮಿಕರು ಸಹ ಅರ್ಹರು. (ಕರ್ನಾಟಕರಾಜ್ಯದ ಬಿ.ಪಿ.ಎಲ್‍ಕಾರ್ಡ್ ಹೊಂದಿದಲ್ಲಿ). ಬಿಪಿಎಲ್‍ಕಾರ್ಡ್ ಹೊಂದಿದವರಿಗೆ ಮಾತ್ರ , ಆಧಾರ್ ಸಂಖ್ಯೆ ಲಿಂಕ್‍ಆಗಿರುವ ಬ್ಯಾಂಕ್‍ಖಾತೆ ಹೊಂದಿರುವುದುಕಡ್ಡಾಯ.
ಪೂರಕ ದಾಖಲೆಗಳು: ಅಗಸ/ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವಕುರಿತು ನಿಗಿದಿತ ನಮೂನೆಯಲ್ಲಿ ಅಧಿಕಾರಿಗಳಿಂದ ಪಡೆದಉದ್ಯೋಗದೃಢಿಕರಣ ಪತ್ರ. ನಿಗದಿತ ನಮೂನೆಯಲ್ಲಿ ಸ್ವಯಂಘೋಷಣೆ. ಬಿ.ಪಿ.ಎಲ್‍ಕಾರ್ಡ್. ಆಧಾರ್‍ಕಾರ್ಡ್. ಜನ್ಮ ದಿನಾಂಕ ದಾಖಲೆ. ಪಾಸ್‍ಪೋರ್ಟ್ ಅಳತೆಯ ಇತ್ತಿಚಿನ ಭಾವಚಿತ್ರದೊಂದಿಗೆ , ಜೂನ್ 30 ರೊಳಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.