ಉಡುಪಿ: ದಿನಾಂಕ 22-06-2020 ಉಡುಪಿಯ ಹವಮಾನ ವರದಿಯ ಪ್ರಕಾರ ಕಳೆದ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದ ನಿತೀಶ ಬಿನ್ ಸಂಜೀವ ಶೆಟ್ಟಿ ರವರ ಪಕ್ಕಾ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಿಂದಾಗಿ ¸ಸುಮಾರು ರೂ.10000 ದಷ್ಟು ಹಾನಿಯಾಗಿದೆ. ಅಂತೆಯೇ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದ ಭಾಸ್ಕರ ನಾಯಕ್ ಬಿನ್ ಸಂಜೀವ ನಾಯಕ್ ರವರ ಪಕ್ಕಾ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಿಂದಾಗಿ ಸುಮಾರು ರೂ.15000 ದಷ್ಟು ಹಾನಿಯಾಗಿದೆ. ಹಾಗೂ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗೋಪಾಲ ಕೃಷ್ಣ ಪೈ ಬಿನ್ ಸುಬಾಯ ಪೈರವರ ಪಕ್ಕಾ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಿಂದಾಗಿ ¸ಸುಮಾರು ರೂ.20000 ದಷ್ಟು ಹಾನಿಯಾಗಿದೆ.ಎಂದು ಪ್ರಕಟಣೆ ತಿಳಿಸಿದೆ.

ಅಂತೆಯೇ ಉಡುಪಿ ಜಿಲ್ಲೆಯಲ್ಲಿ, ಉಡುಪಿ - 25, ಕುಂದಾಪುರ -26 ಕಾರ್ಕಳ -56ಮಿ .ಮೀ ಆಗಿರುತ್ತದೆ.

ಹಾಗಾಗಿ ಮೂರು  ತಾಲೂಕುಗಳ  ಸರಾಸರಿ ಮಳೆ 35.67ಮಿ .ಮೀ. ಮಳೆಯಾಗಿರುತ್ತದೆ. ಎಂದು ಪ್ರಕಟಣೆ ತಿಳಿಸಿದೆ.