ಉಡುಪಿ:- ದಿನಾಂಕ 08-07-2020 ಉಡುಪಿಯ ಹವಮಾನ ವರದಿಯ ಪ್ರಕಾರ ಕಳೆದ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಬೈಂದೂರು ತಾಲೂಕಿನ ಶಿರೂರು ಗ್ರಾಮದ ದುರ್ಗಿ ಕೋಂ ರಾಮ ಪೂಜಾರಿ ರವರ ಪಕ್ಕಾ ವಾಸ್ತವ್ಯದ ಮನೆ ಗಾಳಿ ಮಳೆಯಿಂದಾಗಿ ಭಾಗಶಃ ಹಾನಿಯಿಂದಾಗಿ ¸ಸುಮಾರು ರೂ.30,000 ದಷ್ಟು ಹಾನಿಯಾಗಿದೆ. ಅಂತೆಯೇ  ಬೈಂದೂರು ತಾಲೂಕಿನ ಕೊಲ್ಲೂರು  ಗ್ರಾಮದ ಸವಿತಾ ಕೋಂ ಬಾಬು ಭಂಡಾರಿ ರವರ ಪಕ್ಕಾ ವಾಸ್ತವ್ಯದ ಮನೆ ಗಾಳಿ ಮಳೆಯಿಂದಾಗಿ ಭಾಗಶಃ  ಹಾನಿಯಿಂದಾಗಿ ¸ಸುಮಾರು ರೂ.1,50,000 ದಷ್ಟು ಹಾನಿಯಾಗಿದೆ. ಅಂತೆಯೇ ಬೈಂದೂರು ತಾಲೂಕಿನ ಕೊಲ್ಲೂರು  ಗ್ರಾಮದ ಯಶೋಧ  ಕೋಂ ಚಂದ್ರಶೇಖರ  ಬೋವಿ ರವರ   ವಾಸ್ತವ್ಯದ ಮನೆ ಶೀಟು  ಗಾಳಿ ಮಳೆಯಿಂದಾಗಿ ಭಾಗಶಃ  ಹಾನಿಯಿಂದಾಗಿ ¸ಸುಮಾರು ರೂ.25,000 ದಷ್ಟು ಹಾನಿಯಾಗಿದೆ. ಅಂತೆಯೇ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ರಾಬಿಯ ರವರ ವಾಸ್ತವ್ಯದ ಮನೆ ಭಾಗಶಃ  ಹಾನಿಯಿಂದಾಗಿ ¸ಸುಮಾರು ರೂ.40,000 ದಷ್ಟು ಹಾನಿಯಾಗಿದೆ. ಹಾಗೂ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ವನಜ ಶೆಡ್ತಿ ರವರ ಮನೆಯ ಹಂಚು ಗಾಳಿ ಮಳೆಗೆ ಭಾಗಶಃ  ಹಾನಿಯಿಂದಾಗಿ ¸ಸುಮಾರು ರೂ.25,000 ದಷ್ಟು ಹಾನಿಯಾಗಿದೆ. ಎಂದು ಪ್ರಕಟಣೆ ತಿಳಿಸಿದೆ.

ಅಂತೆಯೇ ಉಡುಪಿ ಜಿಲ್ಲೆಯಲ್ಲಿ, ಉಡುಪಿ - 100.6, ಕುಂದಾಪುರ -128.5 ಕಾರ್ಕಳ-107.5 ಮಿ .ಮೀ  ಆಗಿರುತ್ತದೆ. ಹಾಗಾಗಿ ಮೂರು  ತಾಲೂಕುಗಳ  ಸರಾಸರಿ ಮಳೆ 116ಮಿ . ಮೀ .ಮಳೆಯಾಗಿರುತ್ತದೆ. ಎಂದು ಪ್ರಕಟಣೆ ತಿಳಿಸಿದೆ.