
ಮಂಗಳೂರು:- ನೀರು ಮನುಷ್ಯನಿಗೆ ಗಾಳಿ ಬೆಳಕಿನ ನಂತರ ಅತೀ ಅವಶ್ಯಕವಾದ ವಸ್ತು. ಇತ್ತೀಚಿನ ಮಾಹಿತಿಯಂತೆ ನಮ್ಮ ದೇಶದಲ್ಲಿ ಬರಗಾಲ ಪೀಡಿತ ರಾಜ್ಯಗಳು ಜಾಸ್ತಿಯಾಗುತ್ತಿದ್ದು ರಾಷ್ಟ್ರಮಟ್ಟದಲ್ಲಿ 2002ರಲ್ಲಿ 26% ಜಿಲ್ಲೆಗಳು ಬರಪೀಡಿತವಾಗಿದ್ದು 2019ರ ಸುಮಾರಿಗೆ ಸುಮಾರು 42% ಜಿಲ್ಲೆಗಳು ಬರಪೀಡಿತ ಎಂದು ತಿಳಿದುಬಂದಿದ್ದು ಇದು ಆತಂಕಕಾರಿ ಬೆಳವಣಿಗೆ ಆಗಿದೆ.
ರೋಟರಿ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ 8 ವಿಭಾಗಗಳಲ್ಲಿ ಜನರಿಗೆ ಸೇವೆ ಸಲ್ಲಿಸಬೇಕು ಎಂದು ಮಾರ್ಗದರ್ಶನ ನೀಡಿದೆ. ಇವುಗಳಲ್ಲಿ ಜಲಸಂರಕ್ಷಣೆಯು ಒಂದು. 2003ರಲ್ಲಿ ಭಾರತದ ಎಲ್ಲಾ ವಿವಿಧ ಕ್ಲಬ್‍ನ ಅಧ್ಯಕ್ಷರುಗಳು ಮತ್ತು ಜಿಲ್ಲಾ ಗವರ್ನರ್‍ಗಳು ಸೇರಿ ರೋಟರಿ “ಇಂಡಿಯಾ ವಾಟರ್ ಮಿಶನ್” ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ಸ್ವಯಂಸೇವಾ ಸಂಸ್ಥೆಯು ಜಲಸಂರಕ್ಷಣೆ ಬಗ್ಗೆ ದೇಶದ ಎಲ್ಲಾ ರೋಟರಿ ಅಧ್ಯಕ್ಷರುಗಳು ಜೊತೆ ಸಮನ್ವಯ ಸಾಧಿಸಿಕೊಂಡು ಹಲವಾರು ಇಲಾಖೆಗಳೋಂದಿಗೆ ಕೈ ಜೋಡಿಸಿ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿದೆ. ಜಲಾನಯನ ಪ್ರದೇಶಾಭಿವೃದ್ಧಿ, ಮಾಹಿತಿ ವಿನಿಮಯ, ಕೆರೆ ಅಭಿವೃದ್ಧಿ, ನೀರಿನ ಮಿತಬಳಕೆ ಮತ್ತು ಮಳೆ ನೀರು ಕೊಯ್ಲು - ಈ ಐದು ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ಇದರ ಮಾರ್ಗದರ್ಶನದೊಂದಿಗೆ ಮತ್ತು ಜಲ ಸಾಕ್ಷರತೆಯು ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ರೋಟರಿ ಜಿಲ್ಲಾ ಜಲ ಸಮಿತಿಯ ಅಧ್ಯಕ್ಷರು, ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ಆಗಿರುವ ರಾಜೇಂದ್ರ ಕಲ್ಬಾವಿಯವರ ಮುಂದಾಳತ್ವದಲ್ಲಿ “Water is Life” ಎಂಬ You tube Channel ನ್ನು ಪ್ರಾರಂಭಿಸಲಾಗಿದೆ.

ಇದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ Water is Life -Harvest Water ಎಂಬ You tube Channel ನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದರ ಉದ್ಘಾಟನೆಯನ್ನು 2020-21ನೇ ಸಾಲಿನ ಜಿಲ್ಲಾ ಗವರ್ನರ್ ಆಗಿರುವ ರಂಗನಾಥ್ ಭಟ್ ಇವರು ದಿನಾಂಕ:08.07.2020 ರಂದು ಪತ್ರಿಕಾ ಮಾಧ್ಯಮಗಳ ಸಮ್ಮುಖದಲ್ಲಿ ಉದ್ಘಾಟಿಸಿದರು. ಈ You tube Channel ನಲ್ಲಿ ಮುಂದಿನ 1 ವರ್ಷದ ಅವಧಿಯಲ್ಲಿ ರೋಟರಿಯಂತಹ ಸ್ವಯಂ ಸೇವಾ ಸಂಸ್ಥೆಗಳು ಯಾವ ರೀತಿಯಲ್ಲಿ ಜಲಸಾಕ್ಷರತೆ ಬಗ್ಗೆ ಸೇವಾ ಕಾರ್ಯವನ್ನು ಕೈಗೊಳ್ಳಬಹುದೆಂದು ಮತ್ತು ನೀರು ಇಂಗಿಸುವ ವಿಚಾರಗಳ ಬಗ್ಗೆ ವಿಸ್ತೃತವಾಗಿ ವೀಡಿಯೊ ಸಹಿತ ಮಾಹಿತಿಯನ್ನು ನೀಡಲಾಗುವುದು.

ಒಂದು ವರ್ಷದಲ್ಲಿ ಕನಿಷ್ಟ 25 ಕಂತುಗಳಲ್ಲಿWater is Life ಎಂಬ ಶೀರ್ಷಿಕೆಯೊಂದಿಗೆ ಇದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಈ You tube Channel ನ್ನು ಪ್ರಾರಂಭಿಸಲಾಗಿದೆ. ರೋಟರಿ ಸೇವಾ ಸಂಸ್ಥೆ ಈಗಾಗಲೇ ಜಿಲ್ಲೆಯಾದ್ಯಂತ ಕೈಗೊಂಡಿರುವ ಯಶಸ್ವಿ ಜಲ ಸಂರಕ್ಷಣಾ ಕಾರ್ಯಗಳನ್ನು ಹೆಚ್ಚು ಪ್ರಚಾರ ನೀಡಿ ಬಿತ್ತರಿಸಲಾಗುವುದು. ಈ ಸಾಧನೆಗೆ ಸಹಕಾರ ನೀಡಲಿರುವ ವಿವಿಧ ವಲಯಗಳ ಸಹಾಯಕ ಗವರ್ನರ್ ಗಳ ಪರವಾಗಿ ಈ ಸಮಾರಂಭದಲ್ಲಿ ಡಾ.ಶಿವಪ್ರಸಾದ್ ಮತ್ತು ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ದ.ಕ. ನಿರ್ಮಿತಿ ಕೇಂದ್ರದ ಸಿಬ್ಬಂದಿಗಳ ಸಹಕಾರದೊಂದಿಗೆ ಮಳೆನೀರು ಕೊಯ್ಲು ಮತ್ತೆ ಅದಕ್ಕೆ ಸಂಬಂಧಪಟ್ಟ ತಾಂತ್ರಿಕ ಸಹಕಾರವನ್ನು ನೀಡಲಿದ್ದಾರೆ. ಈ Channel ನ ಪ್ರವರ್ತಕರಾಗಿ ರಾಜೇಂದ್ರ ಕಲ್ಬಾವಿಯವರು ನಿರೂಪಣೆ ಮತ್ತು ತಾಂತ್ರಿಕ ಸಹಾಯದ ಮಾರ್ಗದರ್ಶನದಲ್ಲಿ ಈ Channel ನ್ನು ಮುಂದೆಯೂ ನೀರಿನ ಜಲ ಸಾಕ್ಷರತೆಗೆ ತನ್ನ ಸೇವೆಯನ್ನು ಸಲ್ಲಿಸಲಿದೆ.
ಸಾರ್ವಜನಿಕರು ಈ Channel ನ್ನು subscribe ಮಾಡಿ ಪ್ರತಿಯೊಂದು ಕಂತುಗಳನ್ನು Like ಮಾಡಿ ತಮ್ಮ ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

