ಉಡುಪಿ ಮಾರ್ಚ್ 5 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲೆ, ಉಡುಪಿ ತಾಲೂಕು ವ್ಯಾಪ್ತಿಯ ಪಡುತೋನ್ಸೆ ಗ್ರಾಮದ 31 ನೇ ತೋನ್ಸೆ (ಕೆಮ್ಮಣ್ಣು) ಗ್ರಾಮ ಪಂಚಾಯತ್ ನಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದ ರಾಷ್ಟ್ರೀಯ ಗ್ರಾಮೀಣ ತ್ವರಿತ ನೀರು ಸರಬರಾಜು ಯೋಜನೆಯಡಿ 1988-89 ರಲ್ಲಿ ನಿರ್ಮಾಣವಾಗಿದ್ದ ಪ್ರಮುಖ ಬಾವಿಯು ಕುಸಿಯುತ್ತಿದ್ದುದರಿಂದ ಅದನ್ನು ಖevivಚಿಟ ಔಜಿ PWS Sಛಿheme ಣo ಉuಜಥಿಚಿm iಟಿ ಏemmಚಿಟಿಟಿu ಉP oಜಿ UಆUPI ಖಿಚಿಟuಞu  ಯೋಜನೆಯಡಿ ಪುನರ್ರಚಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದೆ. ಅದರಿಂದಾಗಿ ಗ್ರಾಮ ಪಂಚಾಯತಿ ಪ್ರದೇಶಕ್ಕೊಳಪಡುವ ಕುಡಿಯುವ ನೀರಿನ ಸಂಪರ್ಕವನ್ನು ಪಡೆದುಕೊಂಡ, ನೀರು ಬಳಕೆದಾರರು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕಾದ ಅನಿವಾರ್ಯತೆ ಉದ್ಭವವಾಗಿದೆ.

      ಸ್ವಜಲಧಾರ ಯೋಜನೆಯಡಿ ನಿರ್ಮಿಸಲಾದ ಬಾವಿ ಮತ್ತು ಇತರ ಜಲ ಮೂಲವನ್ನೇ ಆಶ್ರಯಿಸಿಕೊಂಡು ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಗಮನಿಸಿದಂತೆ, ಕೆಲವು ಮನೆಗಳಲ್ಲಿ ಅಂಡರ್ ಗ್ರೌಂಡ್ ಟ್ಯಾಂಕಿನ ವ್ಯವಸ್ಥೆ ಮಾಡಿಕೊಂಡಿರುವುದು, ನೀರು ಸರಬರಾಜಿನ ಪೈಪ್ ಗೆ ವಿದ್ಯುತ್ ಯಂತ್ರದ ಸಂಪರ್ಕ ಪಡೆದುಕೊಳ್ಳುವುದು, ನೀರನ್ನು ಮನೆಯ ಕೈತೋಟ ಮತ್ತು ಇತರ ತೋಟಗಾರಿಕೆಯ ಉದ್ದೇಶಕ್ಕೆ ಬಳಸಲಾಗುತ್ತಿರುವುದರಿಂದ ಗ್ರಾಮದ ಕೆಲವು ಪ್ರದೇಶಗಳಲ್ಲಿ ಹೆಚ್ಚು ನೀರು ಮತ್ತು ಕೆಲವು ಪ್ರದೇಶಗಳಿಗೆ ನೀರೇ ತಲುಪದ ಪರಿಸ್ಥಿತಿ ಉಂಟಾಗಿದೆ.

      ಆದುದರಿಂದ ಕುಡಿಯುವ ನೀರಿನ ಸಂಪರ್ಕವನ್ನು ಪಡೆದವರು ತಾವು ಪಡಕೊಂಡ ಸಂಪರ್ಕದಿಂದ ಲಭಿಸುವ ನೀರನ್ನು ಕುಡಿಯಲು ಮಾತ್ರ ಬಳಸಿಕೊಂಡು ಇತರರಿಗೂ ಕುಡಿಯುವ ನೀರು ಒದಗುವಂತೆ ಮಾಡಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯತ್ ನಿರ್ಣಯ ಮತ್ತು ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ನಿಯಮಾವಳಿಗಳ ಪ್ರಕಾರ ನೀರನ್ನು ದುರುಪಯೋಗ ಪಡಿಸುವವರ ಸಂಪರ್ಕವನ್ನು ಗ್ರಾಮ ಪಂಚಾಯತಿನಿಂದಲೇ ಕಡಿತಗೊಳಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ತೋನ್ಸೆ (ಕೆಮ್ಮಣ್ಣು) ಗ್ರಾಮ ಪಂಚಾಯತ್‍ನ ಪ್ರಕಟಣೆ ತಿಳಿಸಿದೆ.