ಉಡುಪಿ ಮೇ 15: ಕನಿಷ್ಠ 50 ಸ್ವದೇಶಿ ಜಾನುವಾರುಗಳನ್ನು ಕಳೆದ 3 ವರ್ಷಗಳಿಂದ ಪೋಷಿಸುತ್ತಿದ್ದು, ನೋಂದಾಯಿತ ಟ್ರಸ್ಟ್ನ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಯವರಿಂದ ಮೈಸೂರಿನ ಪಿಂಜರಾಪೋಲ್ ಹಾಗೂ ಇತರ ಗೋಶಾಲೆಗಳಿಗೆ ಬೆಂಬಲ ನೀಡುವ ಯೋಜನೆಯಡಿ , 2020-21 ನೇ ಸಾಲಿನಲ್ಲಿ ಅರ್ಜಿಗಳನ್ನು ಸ್ವೀಕರಿಸಲಿದ್ದು, ಆಸಕ್ತ ಗೋಶಾಲೆಯವರು  ಜೂನ್ 1 ರ ಅಪರಾಹ್ನದೊಳಗೆ (5.00 ಗಂಟೆಯೊಳಗೆ) ಈ ಕಚೇರಿಗೆ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ಉಡುಪಿಯ ಕಚೇರಿ ದೂರವಾಣಿ ಸಂಖ್ಯೆ- 0820-2534024 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಕೋರಿದೆ.