ಉಡುಪಿ,(ಡಿಸೆಂಬರ್ 31) : ಹಿನ್ನೀರು ಪ್ರದೇಶಗಳಲ್ಲಿ ಪಂಜರ ಕೃಷಿ ಕೈಗೊಳ್ಳಲು ಹೂಡಿಕೆ ವೆಚ್ಚಗಳಿಗೆ ಸಹಾಯಧನವನ್ನು ಪಾವತಿಸುತ್ತಿರುವುದರಿಂದ ಸದರಿ ಯೋಜನೆಗೆ ಕುಂದಾಪುರ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-2) ಕಚೇರಿಗೆ ಅರ್ಜಿ ಸಲ್ಲಿಸಿರುವ ಮೀನು ಕೃಷಿಕರು ಸದರಿ ಪಂಜರಗಳನ್ನು ಜನವರಿ 6 ರಂದು ಇಲಾಖಾಧಿಕಾರಿಗಳಿಗೆ ತಪಾಸಣೆಗೆ ಹಾಜರು ಪಡಿಸಲು ಸೂಚಿಸಲಾಗಿದೆ.
ಸದರಿ ದಿನದಂದು ತಪಾಸಣೆಗೆ ಹಾಜರು ಪಡಿಸದೇ ಇರುವ ಪಂಜರಗಳನ್ನು ಸಹಾಯಧನಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಕುಂದಾಪುರ ಮೀನುಗಾರಿಕೆ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.