ಉಡುಪಿ,(ಡಿಸೆಂಬರ್ 31) : ಭಾರತ ಸರ್ಕಾರದ ನೆಹರು ಯುವ ಕೇಂದ್ರ ಸಂಘಟನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಅಡ್ವೆಂಚರ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 2 ರಂದು ಬೆಂಗಳೂರು ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಯುವ ಕೇಂದ್ರದ ಆವರಣದಲ್ಲಿ ಒಂದು ದಿನದ ಉಚಿತ ಸಾಹಸ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಡಿಯಲ್ಲಿ ಯುವ ಜನರಿಗೆ ಕೃತಕ ಗೋಡೆ ಹತ್ತುವಿಕೆ, ಮತ್ತಿತರ ಸಾಹಸ ಚಟುವಟಿಕೆ ಹಮ್ಮಿಕೊಳ್ಳುವುದರ ಜೊತೆಗೆ ಸಾಹಸ ಚಲನಚಿತ್ರ ಪ್ರದರ್ಶಿಸಲಾಗುತ್ತದೆ. ಅಲ್ಲದೇ ಸಾಹಸ ಕ್ರೀಡೆಗೆ ಸಂಬAಧಿಸಿದ ವಸ್ತು ಪ್ರದರ್ಶನ ಹಾಗೂ ಸಲಕರಣೆಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ.
ಆಸಕ್ತಿ ಇರುವ ಯುವ ಜನರು ಜನವರಿ 2 ರ ಬೆಳಗ್ಗೆ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಯುವ ಕೇಂದ್ರದ ಆವರಣದಲ್ಲಿ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9902781815, 9008840491 ನ್ನು ಸಂಪರ್ಕಿಸುವoತೆ ಪ್ರಕಟಣೆ ತಿಳಿಸಿದೆ.