ಉಡುಪಿ, (ಅಕ್ಟೋಬರ್ 29) : ಉಡುಪಿ ಸ್ತ್ರೀ ಸೇವಾನಿಕೇತನ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಸಮಿತಿಗೆ ಓರ್ವ ಅಧಿಕಾರೇತರ ಸದಸ್ಯರನ್ನು ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.

    ಉಚಿತ ಸೇವೆ ಸಲ್ಲಿಸಲು ಇಚ್ಛಿಸುವ ಸಮಾಜ ಸೇವಾ ಕಾರ್ಯಕರ್ತರು ವಿದ್ಯಾರ್ಹತೆ, ಸಮಾಜ ಸೇವಾ ವಿವರ ಹಾಗೂ ದೂರವಾಣಿ ಸಂಖ್ಯೆಯನ್ನು 15 ದಿನಗಳ ಒಳಗೆ ಉಡುಪಿ ನಿಟ್ಟೂರು ಸ್ತ್ರೀ ಸೇವಾನಿಕೇತನ ಅಧೀಕಕ್ಷರ ಕಚೇರಿಗೆ ನೀಡುವಂತೆ ಪ್ರಕಟಣೆ ತಿಳಿಸಿದೆ.