ಮಂಗಳೂರು (ಅಕ್ಟೋಬರ್ 22):-ಬಂಟ್ವಾಳ ತಾಲೂಕಿನ ಶಿಶು ಅಭಿವೃದ್ಧಿಯೋಜನಾ ವ್ಯಾಪ್ತಿಯಲ್ಲಿ ವಿಕಲಚೇತನರಗ್ರಾಮೀಣ ಪುನರ್ವಸತಿಕಾರ್ಯಕರ್ತರ ಹುದ್ದೆಗೆ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣ/ಅನುತ್ತೀರ್ಣರಾದ ವಿಕಲಚೇತನರಿಂದ ನವೆಂಬರ್ 7 ರೊಳಗೆ ಅರ್ಜಿಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿಯೋಜನಾಕಚೇರಿ, ಕೈಕುಂಜೆ, ಬ.ಸಿ.ರೋಡ್, ಬಂಟ್ವಾಳ ದೂ.ಸಂ: 08255-232465 ಸಂಪರ್ಕಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.