ಉಡುಪಿ ಜೂನ್ 5 : ಔಷಧಿ ಸಸ್ಯಗಳನ್ನು ಬೆಳೇಸಿ,  ಪರಿಸರವನ್ನು ಉಳಿಸುವುದು, ಪರಿಸರಕ್ಕೆ ನಮ್ಮ ಕೊಡುಗೆಯನ್ನು ನೀಡುವುದು ಎಲ್ಲರ ಜವಾಬ್ದಾರಿ. ಗಿಡಗಳನ್ನು ನೆಡುವದರ ಜೊತೆಗೆ ಅದನ್ನು ಪೋಷಿಸಿ ರಕ್ಷಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶ ಸಿ.ಎಂ.ಜೋಶಿ ಹೇಳಿದರು.ಅವರು ಶುಕ್ರವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ,  ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ  ಸಂಘ(ರಿ), ಅರಣ್ಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡಮೂಲಿಕೆ / ಔಷಧೀಯ ಸಸಿ ನೆಡುವ ಮತ್ತು ವಿತರಣಾ ಕಾರ್ಯಕ್ರಮದಲ್ಲಿ ಗಿಡ ನೆಟ್ಟು  ಮಾತನಾಡಿದರು.

   ಕಾರ‍್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿವೇಕಾನಂದ ಎಸ್. ಪಂಡಿತ್, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರುಗಳಾದ ಲಾವಣ್ಯ ಹೆಚ್.ಎನ್, ಭವಾನಿ ಎಲ್.ಜೆ, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಇರ್ಫಾನ್, ಮಂಜುನಾಥ ಎಂ.ಎಸ್, ಶೋಭಾ ಇ, ಮಹಾಂತೇಶ ಬುಸಗೊಳ್, ನಿರ್ಮಲ, ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್ ಹಾಗೂ ಹಿರಿಯ ವಕೀಲರು ಉಪಸ್ಥಿತರಿದ್ದರು.