ಉಡುಪಿ: ವಿಶ್ವ ಪರಿಸರ ದಿನಾಚರಣೆಯಂದು,  ಅದಮಾರು ಮಠದ ಆವರಣದಲ್ಲಿ , ಅದಮಾರು ಶ್ರೀಗಳು ಗಿಡ ನೆಡುವುದರ ಮೂಲಕ ಎಲ್ಲರಿಗೂ ಸ್ಪೂರ್ತಿಯಾದರು.

ಮಠದ ಅವರಣದಲ್ಲಿ ಗಿಡ ನೆಟ್ಟು ಮಾತನಾಡಿದ ಶ್ರೀಗಳು, ಗಿಡ ಮರಗಳು ಹಾಗೂ ಪ್ರಕೃತಿಯ ಸಂರಕ್ಷಣೆ ಪ್ರಸ್ತುತ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಕರಾಗಬೇಕು ಎಂದರು.

       ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಮಾತನಾಡಿ, ಅರಣ್ಯ ಇಲಾಖೆವತಿಯಿಂದ , ಇಂದಿನಿoದ 2 ತಿಂಗಳ ಕಾಲ ಜಿಲ್ಲೆಯಾದ್ಯಂತ  ಗಿಡ ನೆಡುವ ಅಭಿಯಾನ ನಡೆಯಲಿದೆ, ಸಾರ್ವಜನಿಕರು ಗಿಡ ಮರಗಳನ್ನು ರಕ್ಷಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.