ಉಡುಪಿ ಜೂನ್ 22 :   ಡೆಂಗ್ಯೂ ವಿರೋಧಿ ಸೇನಾನಿಗಳಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ , ಗ್ರಾಮ ಪಂಚಾಯತ್ ಮಾಳ ಇವರ ವತಿಯಿಂದ ಸನ್ಮಾನ ಮತ್ತು ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವು ಶ್ರೀ ರಾಮ ಮಂದಿರ ಸಭಾಂಗಣ ಮಾಳ ದಲ್ಲಿ ಜೂನ್ 17 ರಂದು ನಡೆಯಿತು.

   ಮಳೆಗಾಲದ ಆರಂಭದಲ್ಲಿ ಕಂಡುಬರುವ ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಮಲೇರಿಯಾ ಮುಂತಾದ ಸಾಂಕ್ರಮಿಕ ಕಾಯಿಲೆಗಳ ನಿಯಂತ್ರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಮೀಕ್ಷೆ ಕಾರ್ಯ ಆರೋಗ್ಯ, ಶಿಕ್ಷಣ ಮಾಹಿತಿ ನೀಡುತ್ತಾ , ನಿಯಂತ್ರಣ ಕರ‍್ಯದಲ್ಲಿ ಹಗಲಿರುಲು ಶ್ರಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಡೆಂಗ್ಯೂ ವಿರೋಧಿ ದಿನಾಚರಣೆಯಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

      ಈ ಸಂದರ್ಭದಲ್ಲಿ ಮೂಡಬಿದ್ರೆ ಗ್ರಾಮೀಣ ಕೂಟ ವತಿಯಿಂದ ಕೊರೋನ ವಾರಿರ‍್ಸ್ಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ಮಲ್ಲಿಕಾರ್ಜುನ್ ವಿತರಿಸಿದರು.