ಉಡುಪಿ ಜೂನ್ 22: ಡೆಂಗ್ಯೂ ಇನ್ನಿತರ ಸೊಳ್ಳೆಗಳಿಂದ ಹರಡುವ ಕಾಯಿಲೆ ತಮ್ಮ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಅದಕ್ಕೆ ಬೇಕಾದ ನಿಯಂತ್ರಣ ಕ್ರಮಗಳಿಗೆ ಆರೋಗ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸ್ಥಳೀಯ ಸಂಸ್ಥೆಗಳ ಸೇವೆ ಸಹಕಾರ ಅಗತ್ಯತೆಯಿರುವುದು ಅನಿವಾರ್ಯವಾಗಿದೆ ಎಂದು ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಹೆಗ್ಡೆ ಹೇಳಿದ್ದಾರೆ.
ಅವರು ಮಾಳದ ರಾಮ ಮಂದಿರ ಸಭಾಂಗಣದಲ್ಲಿ ಬುಧವಾರ , ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಛೇರಿ ಕಾರ್ಕಳ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಳ, ಮಾಳ, ಕೆರ್ವಾಶೆ ಸೇವಾ ಸಹಕಾರಿ ನಿಯಮಿತ ಬ್ಯಾಂಕ್ ಮಾಳ, ಗ್ರಾಮ ಪಂಚಾಯತ್ ಮಾಳ ಇವರ ಸಹಯೋಗದಲ್ಲಿ ನಡೆದ ಡೆಂಗ್ಯೂ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾದ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಕೃಷ್ಣಾನಂದ ಶೆಟ್ಟಿ ಡೆಂಗ್ಯೂ ಕಾಯಿಲೆಯ ಲಕ್ಷಣಗಳು ಇತರ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಸೊಳ್ಳೆ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳು, ಕೊರೋನ ವೈರಸ್ನ ಕುರಿತಾಗಿ ಸಂಕ್ಷೀಪ್ತವಾಗಿ ವಿವರಿಸಿದರು. ಹಿರಿಯ ಆರೋಗ್ಯ ಸಹಾಯಕ ಶಿವರಾಮ್ ರಾವ್ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಸುಮಲತಾ, ಸದಸ್ಯರಾದ ಹರೀಶ್ಚಂದ್ರ ತೆಂಡೂಲ್ಕರ್, ರಾಮ್ ಶೇರಿಗಾರ್, ಅಶೋಕ್, ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ಸಹಾಯಕ ಶಿವರಾಮ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಆರೋಗ್ಯ ಸಹಾಯಕ ವಸಂತ್ ಶೆಟ್ಟಿ ಮಾಳ ಸ್ವಾಗತಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್ ನಿರೂಪಿಸಿದರು , ಪಂಚಾಯತ್ ಕಾರ್ಯದರ್ಶಿ ಅಶೋಕ್ ವಂದಿಸಿದರು.