ಉಡುಪಿ: ವಿಶ್ವದ ಯಾವುದೇ ದೇಶದಲ್ಲಿಯೂ ಕಾಣ ಸಿಗದ ವೈವಿದ್ಯತೆ, ಧಾರ್ಮಿಕ ಸಹಿಷ್ಣುತೆ, ಸರ್ವರನ್ನೂ ಮುಕ್ತವಾಗಿ ಪ್ರೀತಿಸಿ ಪೋಷಿಸುವ ಸಂಸ್ಕ್ರತಿ ನಮ್ಮ ಭರತ ಖಂಡದಲ್ಲಿದೆ, ನಮ್ಮ ದೇಶದ ಸಂವಿಧಾನದ ರಚನೆಗಳು  ಮತ್ತದರ ಒಳ ತಿರುಳುಗಳು ಅತ್ಯಂತ ಯೋಜನಾ ಬದ್ದವಾಗಿ ರೂಪು ಗೊಂಡಿದ್ದು ಇಡೀ ಜಗತ್ತಿನಲ್ಲಿಯೇ  ಪ್ರಶಂಸಾರ್ಹವಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆ 2019 ಸಂವಿದಾನ ಬದ್ಧವಾಗಿಯೇ ಅನುಮೋದನೆ ಗೊಂಡಿದ್ದು ಇಡೀ ಯಾವುದೇ ಧಾರ್ಮಿಕ ನೆಲೆಯಲ್ಲಿ ಅಥವಾ ಯಾವುದೇ ವರ್ಗವನ್ನು ಗುರಿಯೆಯಾಗಿಸಿ ಕೊಂಡು ಕಾರ್ಯರೂಪಕ್ಕೆ ತಂದಿದ್ದಲ್ಲ. ಇದನ್ನು ವಿರೋದಿಸಿ ಒಂದು ವರ್ಗವನ್ನು ಎತ್ತಿ ಕಟ್ಟಿ ದೇಶದಲ್ಲಿ ಶಾಂತಿಯನ್ನು ಕದಡುವರು “ಭಾರತ ದೇಶದ  ಪುಣ್ಯ ಭೂಮಿಯು ಯಾವುದೇ ಕೌಟುಂಬಿಕ ತಲೆಮಾರಿನ ಬಳುವಳಿಯಲ್ಲ ಹಾಗು ಇಲ್ಲಿ ತಮ್ಮಿಷ್ಟ ಬಂದಂತೆ ಸೇಚ್ಛಚಾರವಾಗಿ ಉಪಯೋಗಿಸಲು ಅವಕಾಶಗಳಿಲ್ಲ” ಎಂದು ತಿಳಿದು ಕೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆಯವರು ಸ್ಪಷ್ಟ ಪಡಿಸಿದರು. ಅವರು ಶುಕ್ರವಾರ ರಾತ್ರಿ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ನಗರದ ಹೃದಯ ಭಾಗದಲ್ಲಿ ಆಯೋಜಿಸಿದ ಪೌರತ್ವ ತಿದ್ದುಪಡಿ ಕಾಯಿದೆ 2019 ಇದನ್ನು ಬೆಂಬಲಿಸಿ ಬ್ರಹತ್ ಸಹಿ ಸಂಗ್ರಹ ಮತ್ತು ಪ್ರಧಾನಿಗೆ ಪತ್ರ - ಪೋಸ್ಟ್ ಕಾರ್ಡ್ ಅಭಿಯಾನ ಅಭಿಯಾನ ಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಕೆ. ರಘುಪತಿ ಭಟ್ ಅವರು ಮಾತನಾಡಿ ಪ್ರತಿಯೊಂದು ದೇಶದಲ್ಲಿಯೂ ಅಲ್ಲಿ ವಾಸ ಮಾಡ ಬೇಕಾದರೆ  ತನ್ನದೇ ಆದ ಕಾನೂನುಗಳು ಮತ್ತು ನೀತಿ ಸಂಹಿತೆಗಳನ್ನು ಪಾಲಿಸಬೇಕಾಗುತ್ತದೆ. ಭಾರತಕ್ಕೆ ಕೂಡ ತನ್ನದೇ ಆದ ಪ್ರಜಾಪ್ರಭುತ್ವ ಮಾದರಿಯ ಸಂವಿಧಾನವನ್ನು ಹೊಂದಿದ್ದು ಇದುವರೆಗೆ ದೇಶವನ್ನು ಆಳಿದ ಕಾಂಗ್ರೆಸಿಗರಿಗೆ ಅದನ್ನು ಅಧ್ಯಯನ ಮಾಡಿ ಅನುಷ್ಠಾನಕ್ಕೆ ತರುವ ಕ್ಷಮತೆ ಅಥವಾ ಬದ್ಧತೆ ಇರಲಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಮತ್ತು ಲೋಕ ಪ್ರಿಯ ಹೆಜ್ಜೆಯನ್ನು ಪ್ರತಿಭಟಿಸುವ ಯಾವುದೇ ನೈತಿಕ   ಆಧಾರಗಳಿಲ್ಲ  ಮತ್ತು ಅದನ್ನು ಸಮರ್ಥಿಸಿ ಕೊಳ್ಳುವ ಯಾವುದೇ ಕಾರಣ ಅವರಲ್ಲಿಲ್ಲ ಎಂದರು.

ಭಾರಿ ಜನಸಂದಣಿ ಅಭೂತಪೂರ್ವ ಜನಸ್ಪಂದನೆ

ನಗರ ಬಿಜೆಪಿಯ ಈ ಕಾರ್ಯಕ್ರಮ ವಿಶೇಷ ಪರಿಕಲ್ಪನೆಯೋಂದಿಗೆ , ಪರ್ಯಾಯ ಸಂದರ್ಭದಲ್ಲಿ ಉಡುಪಿಯಲ್ಲಿ ಸೇರುವ ಜನಸಂದಣಿಯನ್ನು ಗುರಿಯಾಗಿಸಿಕೊಂಡು  ಆ ಜನರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ 2019 ನ್ನು ಜಾಗ್ರತಿ ಮೂಡಿಸುವ ಉದ್ದೇಶದಲ್ಲಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನಿಯೋಜಿತ ಅಧ್ಯಕ್ಷ ಮಹೇಶ್ ಠಾಕೂರ್, ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಕಿಣಿ ನೇತೃತ್ವದಲ್ಲಿ  ಆಯೋಜಿಸಲಾಗಿತ್ತು. ಪೋಸ್ಟ್ ಕಾರ್ಡ ಅಭಿಯಾನದ ಜೊತೆ ವೇದಿಕೆಯ ಒಂದು ಭಾಗದಲ್ಲಿ ಸಹಿ ಸಂಗ್ರಹಕ್ಕೆ ಬ್ರಹತ್ ಪರದೆಯನ್ನು ಅಳವಡಿಸಿದರೆ ಇನ್ನೊಂದು ಭಾಗದಲ್ಲಿ ದೈತ್ಯ ಟಿವಿ ಪರದೆಯನ್ನು ಅಳವಡಿಸಿ ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಸಹಿತ ರಾಜ್ಯ, ರಾಷ್ಟ್ರದ ನಾಯಕರುಗಳು, ಚಿತ್ರ ತಾರೆಯರು, ಸ್ಥಳೀಯ ನಾಯಕರುಗಳ ಪೌರತ್ವ ಕಾಯಿದೆಯ ಅಭಿಪ್ರಾಯಗಳ ದ್ರಶ್ಯ ಮುದ್ರಣಗಳನ್ನು  ನಿರಂತರವಾಗಿ ರಾತ್ರಿ 3 ಗಂಟೆಯವರೆಗೆ ಪ್ರಸಾರ ಮಾಡಲಾಯಿತು. ಈ ಎಲ್ಲ ಕಾರ್ಯಕ್ರಮಗಳಿಗೂ ಅದ್ಭುತ ಜನಸ್ಪಂದನೆ  ವ್ಯಕ್ತವಾಯಿತು. ಪೋಸ್ಟ್ ಕಾರ್ಡ್ ಅಭಿಯಾನದಲ್ಲಿ ಸಾವಿರಾರು ಜನರು ಭಾಗವಹಿಸಿದರು. ಪೋಸ್ಟ್ ಕಾರ್ಡ್ ಗಳನ್ನು  ರಾತ್ರಿ ಮತ್ತೆ ತರಿಸಲಾಯಿತು.

ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಯಶಪಾಲ್ ಸುವರ್ಣ, ಕುತ್ಯಾರು ನವೀನ ಶೆಟ್ಟಿ, ಸಂದ್ಯಾ ರಮೇಶ್, ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ದಾವೂದ್ ಅಬೂಬಕರ್, ಉಪಾಧ್ಯಕ್ಷ ಅಲ್ವಿನ್ ಡಿಸೋಜ, ಪತ್ರಿಕಾ ವಕ್ತಾರ ಮಂಜುನಾಥ್ ಮಣಿಪಾಲ, ನಗರ ಬಿಜೆಪಿ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಮತ್ತು ಟಿ,ಜಿ ಹೆಗ್ಡೆ, ನಗರಸಭಾ ಸದಸ್ಯೆ ಮಾನಸ ಸಿ ಪೈ, ದಿನೇಶ್ ಅಮೀನ್, ರೋಷನ್ ಶೆಟ್ಟಿ, ಜಿಲ್ಲಾ ಪ್ರಮುಖರಾದ ಪ್ರವೀಣ್ ಕುಮಾರ್ ಶೆಟ್ಟಿ,  ಎ. ಶಿವಕುಮಾರ್, ಪಕ್ಷದ ಪ್ರಮುಖರುಗಳು, ಜನಪ್ರತಿನಿಧಿಗಳು   ಉಪಸ್ಥಿತರಿದ್ದರು.