ಉಡುಪಿ (ಜುಲೈ 14): ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಉಚಿತ ದೂರವಾಣಿ ಸಮಲೋಚನೆ ನೀಡಲು ಟೋಲ್ ಪ್ರೀ ನಂ:18004252244 ಪ್ರಾರಂಭಿಸುತ್ತಿದೆ.
ಉಚಿತ ಟೆಲಿ-ಆಪ್ತ ಸಮಲೋಚನೆಗೆ ಅಗತ್ಯವಿರುವ ಮಾನವ ಸಂಪನ್ಮೂಲದ ಬಳಕೆಗೆ ಯೂನಿಸೆಫ್ ಹಣಕಾಸು ಸಹಾಯ ಮಾಡುತ್ತದೆ. ಕರ್ನಾಟಕದಲ್ಲಿ ಸಮಲೋಚನೆ ಅಗತ್ಯ ವಿರುವ ಎಲ್ಲ ಮಕ್ಕಳಿಗಾಗಿ ಉಚಿತ ಟೆಲಿ-ಕೌನ್ಸ್ ಲಿಂಗ್ ಸೌಲಭ್ಯ ವನ್ನು ನೀಡಲು ಯೋಜಿಸಲಾಗಿದೆ. ಆಪ್ತ ಸಮಲೋಚನೆ ಬಯಸುವ ಕರ್ನಾಟಕದಲ್ಲಿನ ಎಲ್ಲಾ ಮಕ್ಕಳು ಹಾಗೂ ಮಕ್ಕಳ ಪೋಷಕರು ಸಹ 18004252244 ಸಂಖ್ಯೆಗೆ ಕರೆ ಮಾಡುವ ಮೂಲಕ ಉಚಿತವಾಗಿ ಆಪ್ತ ಸಮಲೋಚನೆ ಸೌಲಭ್ಯ ಪಡೆಯಬಹುದು.
ಉಚಿತ ಟೆಲಿ- ಆಪ್ತ ಸಮಲೋಚನೆ ಸೌಲಭ್ಯ ವು ಪ್ರಮುಖವಾಗಿ 2 ಸಿಬ್ಬಂದಿಗಳನ್ನು ಹೊಂದಿದ್ದು ಒಬ್ಬ ಸಿಬ್ಬಂದಿ ಬೆಳ್ಳಿಗೆ 8 ರಿಂದ ಮದ್ನಾಹ್ನ 2 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ ರಾತ್ರಿ 8 ರವರಗೆ ಕೆಲಸ ನಿರ್ವಹಿಸುತ್ತಾರೆ. ಇವರು ಪ್ರಥಮವಾಗಿ ಮಗುವಿನ ಕರೆಗಳನ್ನು ಸ್ವೀಕರಿಸಿ ಮಗುವಿನ ನಿರ್ದಿಷ್ಟ ವಾದ ಸಮಾಲೋಚನೆಯ ಅವಶ್ಯಕತೆಯನ್ನು ಆಧರಿಸಿ ಸಂಬoಧ ಪಟ್ಟ ಸಮಾಲೋಚಕರಿಗೆ ಸಂಪರ್ಕ ಕಲ್ಪಿಸುತ್ತಾರೆ
ಟೋಲ್ ಪ್ರಿ ನಂ: 18004252244 ಬಂದ ಕರೆಗಳಿಗೆ ಅವಶ್ಯಕ ಆಪ್ತ ಸಮಲೋಚನೆ ಒದಗಿಸಲು ರಾಜ್ಯ ದ್ಯಾಂತ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ 148 ಸಮಲೋಚಕರಿಗೆ ಹಾಗೂ ಸಮಾಜ ಕಾರ್ಯಕರ್ತರಿಗೆ ಪ್ರಥಮ ಹಂತದ ತರಬೇತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅನುಭವದ ಆಧಾರದ ಮೇಲೆ ಮನೋಶಸ್ತ್ರ ಬೆಂಬಲದ ಅವಶ್ಯಕತೆ ಇರುವ ಮಕ್ಕಳಿಗೆ ಸೇವೆ ಸಲ್ಲಿಸಲು ಅಗತ್ಯ ವಿರುವ ಹೆಚ್ಚಿನ ತರಭೇತಿಯನ್ನು ಎಲ್ಲಾ ಸಮಲೋಚಕರಿಗೆ ಒದಗಿಸುವ ಮೂಲಕ ಇವರುಗಳ ಸಾಮರ್ಥ್ಯ ಆಗಿಂದಾಗ್ಗೆ ಅಭಿವೃದ್ದಿ ಮಾಡಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.