ಉಡುಪಿ (ಜುಲೈ 14): ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ಮಿಷನ್ ಕಂಪೌoಡ್ ಸರ್ಕಲ್‌ನಿಂದ ಚಂದು ಮೈದಾನ ಕ್ರಾಸ್‌ವರೆಗೆ ಒಳಚರಂಡಿ ಜಾಲ ಪುನರ್ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ದಿನಾಂಕ 15.07.20 ರಿಂದ 18.07.2020 ರವರೆಗೆ ಮಿಷನ್ ಆಸ್ಪತ್ರೆಯಿಂದ ಬೈಲೂರು ಮಹಿಷಮರ್ಧಿನಿ ರಸ್ತೆ ಮೂಲಕ ಕೊರಂಗ್ರಪಾಡಿಗೆ ಹೋಗಿ ಬರುವಂತೆ ಮಾರ್ಪಾಡುಗೊಳಿಸಲಾಗಿರುತ್ತದೆ. ಸಾರ್ವಜನಿಕರು ಸಹಕರಿಸಬೇಕಾಗಿ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.