ಉಡುಪಿ,(ಮಾರ್ಚ್ 4): ಕ್ರೀಡಾ ಪ್ರತಿಭೆಗಳನ್ನು ತಳಮಟ್ಟದಲ್ಲಿ ಗುರುತಿಸಿ, ಬೆಳೆಸುವ ಸಲುವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ಕ್ರೀಡಾ ವಿಜ್ಞಾನ ಕೇಂದ್ರವು ಕ್ರೀಡಾ ಪ್ರತಿಭೆಗಳ ಗುರುತಿಸುವಿಕೆಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದೆ.
ಇದರ ಅಂಗವಾಗಿ ಕ್ರೀಡಾ ವಿಜ್ಞಾನ ಕೇಂದ್ರದ ತಜ್ಞರನ್ನೊಳಗೊಂಡ ತಂಡವು ಮಾರ್ಚ್ 10 ರಂದು ಬೆಳಗ್ಗೆ 8.30 ರಿಂ.ದ 5.30 ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ, 8-13 ವರ್ಷದೊಳಗಿನ ಕ್ರೀಡಾ ವಿಭಾಗಗಳ ಕ್ರೀಡಾಪಟುಗಳ ದೈಹಿಕ & ಮಾನಸಿಕ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಿದ್ದು, ಎಲ್ಲಾ ವಿಭಾಗದ ಕ್ರೀಡೆಗಳ (ಅಥ್ಲೆಟಿಕ್ಸ್ ಹಾಗೂ ಗುಂಪು ಕ್ರೀಡೆಗಳು) ಎಲ್ಲಾ ವರ್ಗಗಳ (ಸಾಮಾನ್ಯ ಎಸ್‌ಸಿ, ಎಸ್‌ಟಿ) ಕ್ರೀಡಾಪಟುಗಳು ಭಾಗವಹಿಸಬಹುದಾಗಿದೆ.
ಸದರಿ ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳು ಆಧಾರ್ ಕಾರ್ಡ್, ಎಸ್‌ಸಿ/ ಎಸ್‌ಟಿ ಜಾತಿ ಪ್ರಮಾಣ ಪತ್ರದೊಂದಿಗೆ ಹಾಜರಾಗಬೇಕು. ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ದೂ.ಸಂಖ್ಯೆ: 0820-2521324, 9480886467 ಅನ್ನು ಸಂಪರ್ಕಿಸುವoತೆ ಇಲಾಖೆಯ ಪ್ರಕಟಣೆ ತಿಳಿಸಿದೆ.