ಉಡುಪಿ,(ಸೆಪ್ಟೆಂಬರ್, 5): ಉಡುಪಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 7ರಿಂದ 21 ರ ವರೆಗೆ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವಾಗಿ ಆಚರಿಸಲಾಗುತ್ತದೆ. 1 ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಜಂತು ಹುಳ ಕಾಣಿಸಿಕೊಳ್ಳುತ್ತಿರುವುದರಿಂದ , ಮಕ್ಕಳ ದೈಹಿಕ ಮತ್ತು ಮಾನಸಿಕ ತೊಂದರೆ ಕಂಡುಬರಲಿದೆ.  ಅಲ್ಪೆಂಡಾಜೋಲ್ ಮಾತ್ರೆಗಳ ಸೇವನೆಯಿಂದ ಜಂತುಹುಳುಗಳು ನಾಶವಾಗಲಿದ್ದು,  ಈ  ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಭೇಟಿ ನೀಡಿ ಮಾತ್ರೆಯನ್ನು ವಿತರಿಸುತ್ತಾರೆ.

  ಜಿಲ್ಲೆಯಲ್ಲಿ ಒಟ್ಟು 240847 ಮಕ್ಕಳಿಗೆ ಅಲ್ಪೆಂಡಾಜೋಲ್ ಮಾತ್ರೆ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗೀಶ್ ತಿಳಿಸಿದ್ದಾರೆ.