ಉಡುಪಿ : ಸರಕಾರಿ  ಪ್ರಥಮದರ್ಜೆ ಕಾಲೇಜು ಹಿರಿಯಡಕದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ  ಯೋಜನೆ ಘಟಕಗಳ ವತಿಯಿಂದ ಜೂನ್ 15 ರಂದು ವನ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

     ಹಿರಿಯಡಕದ ಕರ್ನಾಟಕ ಪಬ್ಲಿಕ್  ಸ್ಕೂಲ್ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕರು ಮತ್ತು ಪರಿಸರ ಪ್ರೇಮಿ ಮೋಹನ್ ಕಡಬ , ಗಿಡ ನೆಡುವುದರ ಮೂಲಕ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ .ನಿಕೇತನ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ,  ಪ್ರತಿಯೊಬ್ಬರು ಸಹ ಪರಿಸರ ರಕ್ಷಣೆಗೆ  ಪಣತೊಟ್ಟು ನಮ್ಮ ಸುತ್ತಲಿನ ಪರಿಸರವನ್ನು ಹಸಿರೀಕರಣಗೊಳಿಸಲು ಕೈ ಜೋಡಿಸಬೇಕು ಎಂದು ಕರೆ ನೀಡಿದರು.

    ಕಾರ್ಯಕ್ರಮದಲ್ಲಿ  ವಿದ್ಯಾರ್ಥಿ ಕ್ಷೇಮಪಲನಾ ಅಧಿಕಾರಿ  ಸುಜಯ ಕೆ.ಎಸ್,  ಎನ್ .ಎಸ್ ಎಸ್ ಯೋಜನಾಧಿಕಾರಿ  ಸುಭಾಷ್ ಎಚ್.ಕೆ, ಮತ್ತು ಪ್ರವೀಣ ಶೆಟ್ಟಿ , ರೇಂಜರ್ಸ್ ಅಧಿಕಾರಿ ಸವಿತಾ, ರೆಡ್ ಕ್ರಾಸ್ ಸಂಚಾಲಕ ಡಾ.ರಾಘವೇಂದ್ರ ಪಿ ಕೆ  ಹಾಗೂ ಕಾಲೇಜಿನ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು