ಮಂಗಳೂರು;- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮವು, ಪರಿಶಿಷ್ಟ ಪಂಗಡದ ಆದಿವಾಸಿ ಬುಡಕಟ್ಟು ಜನಾಂಗ (ಕೊರಗ, ಕುಡಿಯ, ಮಲೆಕುಡಿ, ಸೋಲಿಗ, ಯರವ, ಹಕ್ಕಿಪಿಕ್ಕಿ, ಗೌಡಲು, ಹಸಲರು, ಇರುಳರು, ಇರುಳಿಗ, ಜೇನು ಕುರುಬ, ಮಲೇರು, ಮೇದ, ಮೇದರಿ, ಗೌರಿಗ, ಬುರುಗ, ಸಿದ್ದಿ (ಉ.ಕ ಜಿಲ್ಲೆ), ಕಾಡುಕುರುಬ, ಕತೋಡಿ, ಕಟ್ಕರಿ, ಧೋರ್ ಕತೋಡಿ, ಧೋರ್ ಕಟ್ಕರಿ, ಸನ್ ಕತೋಡಿ, ಸನ್ ಕಟ್ಕರಿ, ಚಂಚು, ಚೆಂಚವಾರ್, ಅಡಿಯನ್, ಪಾರ್ದಿ, ಅಡವಿನ್ ಚಿಂಚರ್, ಪಾನ್ಸಿ ಪಾರ್ದಿ, ಹರಣಶಿಕಾರಿ, ತೋಡ)ದವರಿಗೆ ಗಂಗಾ ಕಲ್ಯಾಣ ಯೋಜನೆಗಳಡಿಯಲ್ಲಿ ವೈಯಕ್ತಿಕ ಕೊಳವೆಬಾವಿ ಸೌಲಭ್ಯ ಕಲ್ಪಿಸಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಅಹ್ವಾಸಲಾಗಿತ್ತು ಅರ್ಜಿ ಸಲ್ಲಿಸುವ  ಕೊನೆಯ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.

     ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಜಿ.ಎಚ್.ಎಸ್.ರಸ್ತೆ ಜನತಾ ಬಜಾರ್ ಕಟ್ಟಡ, 2ನೇ ಮಹಡಿ, ಮಂಗಳೂರು ದೂರವಾಣಿ ಸಂಖ್ಯೆ 0824-2420114 ನ್ನು ಸಂಪರ್ಕಿಸಹುದು ಎಂದು  ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.