ಉಡುಪಿ (ಜುಲೈ 9): ಎಮ್.ಆರ್.ಪಿ.ಎಲ್‌ನ ಸಿ.ಎಸ್.ಆರ್ ನಿಧಿಯ ಧನ ಸಹಾಯದಿಂದ ಅಲಿಮ್ಕೋ ಎಸಿಸಿ, ಬೆಂಗಳೂರು ಇವರ ಮೂಲಕ ಉಡುಪಿ ಜಿಲ್ಲಾ ಅಂಗವಿಕಲರ ಸಬಲೀಕರಣ ಇಲಾಖೆ ಇದರ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಅಂಗವಿಕಲರಿಗೆ ಸಾಧನ ಸಲಕರಣೆಯನ್ನು ವಿತರಿಸಲು ಶಿಬಿರವನ್ನು ಆಯೋಜಿಸಲಾಗಿತ್ತು,
ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಹರಡುವುದು ಹೆಚ್ಚಾಗುತ್ತಿರುವುದರಿಂದ ಹಾಗೂ ವಿಕಲಚೇತನರಿಗೆ ತೊಂದರೆಯಾಗಬಾರದೆoಬ ಹಿತದೃಷ್ಟಿಯಿಂದ ಸದ್ರಿ ಶಿಬಿರವನ್ನು ಮುಂದೂಡಲಾಗಿದೆ ಹಾಗೂ ಶಿಬಿರದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಉಡುಪಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀ ಚಂದ್ರನಾಯ್ಕ್ ತಿಳಿಸಿದ್ದಾರೆ