ಉಡುಪಿ (ಜುಲೈ 9): ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ, ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಮಡಾಗಲ (ಕಾಟು ಪೀರೆ/ಕಾಡು ಹೀರೆ) ತರಬೇತಿ ಕಾರ್ಯಕ್ರಮವನ್ನು ಪೆರ್ಡೂರು ಗ್ರಾಮದ ಅಶ್ವಥ ಹೆಬ್ಬಾರ್ ರವರ ಮಡಾಗಲ ತೋಟದಲ್ಲಿ ಏರ್ಪಡಿಸಲಾಗಿತ್ತು. ಇಲ್ಲಿಯೇ ಏರ್ಪಡಿಸಲು ಕಾರಣ ಅಶ್ವಥ್ ಹೆಬ್ಬಾರ್ ರವರು ಕಳೆದ ವರ್ಷ ಕೃಷಿ ವಿಜ್ಞಾನ ಕೇಂದ್ರ ಏರ್ಪಡಿಸಿದ ಮಡಾಗಲ ಪ್ರಾತ್ಯಕ್ಷಿಕೆಯನ್ನು ತಮ್ಮ ತೋಟದಲ್ಲಿ ಅನುಷ್ಠಾನ ಮಾಡಿ ಇಡೀ ಜಿಲ್ಲೆಯಲ್ಲಿ ವೈಜ್ಞಾನಿಕ ಮಡಾಗಲದ ಬೆಳೆಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.
ಮತ್ತೊಂದು ಕಾರಣವೆಂದರೆ ಅಶ್ವಥ್ ರವರ ಕೃಷಿಯಲ್ಲಿ ಅಗಾದ ಆಸಕ್ತಿಯಿಂದಾಗಿ ಅವರೆ ಸ್ವತಃ ನಮ್ಮನ್ನು ಸಂಪರ್ಕಿಸಿ ಬೆಳೆಯ ಬಗ್ಗೆ ಮಾಹಿತಿ ಪಡೆದು ಇದು ಎಲ್ಲಿ ಬೆಳೆದಿದ್ದಾರೆ ಎಂದು ತಿಳಿದು ಆ ಮಾಹಿತಿಯಂತೆ ಚಟ್ಟಳ್ಳಿಯ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಗೆ ಬೇಟಿ ನೀಡಿ ಅಲ್ಲಿಯೂ ಕೆಲವು ಪ್ರಾಯೋಗಿಕ ಮಾಹಿತಿಯನ್ನು ಪಡೆದು ಆ ನಂತರ ಬರುವಾಗ ಕೆಲವಾರು ಗಿಡಗಳನ್ನು ಕೈ ಚೀಲದಲ್ಲಿ ಕೆಲವು ಗಿಡಗಳನ್ನು ತುಂಬಿಸಿಕೊoಡು ಬಸ್ಸಿನಲ್ಲಿಯೇ ತಂದು ನೆಟ್ಟಿರುತ್ತಾರೆ.
ಇವರ ಆಗಾದವಾದ ಆಸಕ್ತಿಯನ್ನು ಕಂಡು ಕೃಷಿ ವಿಜ್ಞಾನ ಕೇಂದ್ರದಿoದ ಸುಮಾರು 30 ಸೆಂಟ್ಸ್ ಜಾಗಕ್ಕೆ ಬೇಕಾದ ಗಿಡಗಳನ್ನು ಪ್ರಥಮವಾಗಿ ಮುಂಚೂಣಿ ಪ್ರಾತ್ಯಕ್ಷಿಯನ್ನು ಹಮ್ಮಿಕೊಳ್ಳಲಾಯಿತು. ಇದು ಹೊಸ ಕೃಷಿಯಾದ ಕಾರಣ ಇವರ ಕೃಷಿಯನ್ನು ಬರೀ ಬಾಯಲ್ಲಿಯೇ ಹೇಳಿದರೆ ಸಂಪೂರ್ಣವಾಗಿ ಅರ್ಥವಾಗದು ಎಂದು ತಿಳಿಸಲು ಅಶ್ವಥ್ ಹೆಬ್ಬಾರ್ ತೋಟಕ್ಕೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ದತ್ತು ಗ್ರಾಮವಾದ ಶಿರ್ಲಾಲದಿಂದ 5 ಜನ ರೈತರನ್ನು ಕರೆತಂದು ಕ್ಷೇತ್ರ ವೀಕ್ಷಣೆ ಮಾಡಿಸಿ ಮಡಾಗಲ ತೋಟದಲ್ಲಿ ಅವರ ಕೃಷಿಯ ಬಗ್ಗೆ ತಜ್ಞರಿಂದ ಮತ್ತು ವಿಜ್ಞಾನಿಗಳಿಂದ ಭೂಮಿ ತಯಾರಿ, ಏರುಮಡಿ ನಿರ್ಮಾಣ, ಜರಿಹಾಳಿ ಹೊದಿಕೆ, ಗೂಟಗಳನ್ನು ನೆಟ್ಟು ಬೆಲಿಗೆ ಹಬ್ಬಲು ಬಲೆ ಕಟ್ಟುವ ವಿಧಾನ, ಹನಿ ನೀರಾವರಿ ಅಳವಡಿಕೆ, ರಸಾವರಿ, ಎಲೆಗಳ ಮುಖಾಂತರ ಗೊಬ್ಬರ ಕೊಡುವ ಹಾಗೂ ಪ್ರಾಯೋಗಿಕವಾಗಿ ಪರಾಗ ಸ್ಪರ್ಶ ಮಾಡುವ ಬಗ್ಗೆ ಮಾಹಿತಿ ನೀಡಿದರು. ಹಾಗೇಯೇ ಅವರೆ ಬೆಳೆಸಿ ತಯಾರಿಸಿದ ಮಡಾಗಲ ಗಿಡಗಳನ್ನು ತಲಾ 50 ಗಿಡಗಳನ್ನು ಶಿರ್ಲಾಲು ಗ್ರಾಮದ ಆಯ್ದ ರೈತರಿಗೆ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಬಿ. ಧನಂಜಯ, ಚೈತನ್ಯ ಹೆಚ್. ಎಸ್, ತೋಟಗಾರಿಕೆ ತಜ್ಞರು, ಡಾ. ಸಚಿನ್ ಯು. ಎಸ್, ಕೀಟಶಾಸ್ತç ತಜ್ಞರು ಭಾಗವಹಿಸಿ ಸೂಕ್ತ ವೈಜ್ಞಾನಿಕ ಮಾಹಿತಿ ನೀಡಿದರು.