ಉಡುಪಿ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ “ಸುಧಾರಿತ ಹೈನುಗಾರಿಕೆ ಪದ್ಧತಿಗಳು” ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಯಶೋದ ಸುವರ್ಣ ನೆರವೇರಿಸಿ, ರೈತರಿಗೆ ಈ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಕೆ.ವಿ.ಕೆ, ಬ್ರಹ್ಮಾವರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ. ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ. ವರ್ಗಿಸ್ ಕುರಿಯನ್ ಅವರ ಸಾಧನೆಯ ಬಗ್ಗೆ ಶ್ಲಾಘಿಸಿದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಪ್ರಾದ್ಯಾಪಕ ಡಾ.ವಿನೋದ್, ಭಾರತವು ಅತ್ಯಂತ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶ. ಹೈನುಗಾರಿಕೆ ಎಷ್ಟೋ ಜನರಿಗೆ ತಮ್ಮ ಬದುಕು ರೂಪಿಸಿಕೊಳ್ಳಲು ಸಹಾಯವಾಗಿದೆ ಎಂದ ಅವರು, ಹಾಲು ಉತ್ಪಾದನೆ ಬೆಳೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ವಿ.ಕೆ ಬ್ರಹ್ಮಾವರದ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯ ಗೋಪಾಲ ಪೂಜಾರಿ, ಸಾಣೂರು ಪ್ರಗತಿಪರ ಕೃಷಿಕ ಜ್ಞಾನದೇವ್ ಉಪಸ್ಥಿತರಿದ್ದರು.

ಶ್ರೀನಿವಾಸ್ ಹೆಚ್. ಹುಲಕೋಟಿ ಸ್ವಾಗತಿಸಿದರು. ಡಾ. ಎನ್. ಈ. ನವೀನ್ ನಿರೂಪಿಸಿ ವಂದಿಸಿದರು.