ಉಡುಪಿ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛ ಗ್ರಾಮ -ಸ್ವಚ್ಛ ಪರಿಸರ ಸ್ಪರ್ದೇ ಆಯೋಜಿಸಲಾಗಿದ್ದು, ಸಾಂಸ್ಥಿಕ  ಮತ್ತು ಗೃಹೋತ್ಪಾದಿತ ತ್ಯಾಜ್ಯ ನೀರಿನ ಸೂಕ್ತ ವಿಲೇವಾರಿ ಕುರಿತಂತೆ ಕಿರುಚಿತ್ರ , ಯಶೋಗಾಥೆ ಮಾದರಿ ಇವುಗಳಲ್ಲಿ  ಯಾವುದಾದರೂ ಒಂದನ್ನು ಕಳುಹಿಸಿ ಬಹುಮಾನ ಗೆಲ್ಲಬಹುದಾಗಿದೆ. ದ್ರವತ್ಯಾಜ್ಯ ವಿಲೇವಾರಿಯು , ಕನಿಷ್ಠ ಯಾಂತ್ರಿಕ ಬಳಕೆ, ಕಡಿಮೆ ವೆಚ್ಚ, ಸರಳ ಹಾಗೂ ಗ್ರಾಮೀಣ ಸ್ನೇಹಿ ಅಂಶಗಳನ್ನು ಒಳಗೊಂಡಿರಬೇಕು.

      ಸ್ಪರ್ದೆಗೆ ಮಾದರಿಗಳನ್ನು ಸಲ್ಲಿಸಲು ಜೂನ್ 19 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ  ಜಿಲ್ಲಾ ಪಂಚಾಯತ್ ಕಚೇರಿ ಅಥವಾ ಜಿಲ್ಲಾ ಪಂಚಾಯತ್ ಫೇಸ್‌ಬುಕ್ ಪೇಜ್ ಪುಟಕ್ಕೆ ಬೇಟಿ ನೀಡಬಹುದು ಅಥವಾ ದೂ.ಸಂ. 0820-2574945 ಸಂಪರ್ಕಿಸುವoತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಾಣಧಿಕಾರಿ ಪ್ರೀತಿ ಗೆಹಲೋತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.