ಉಡುಪಿ : ಸ್ವಚ್ಛ ಭಾರತ್ ಮಿಷನ್ (ಗ್ರಾ) ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಮನೆ ಹಂತದಲ್ಲಿ ತಾಜ್ಯ ವಿಂಗಡನೆ ಹಾಗೂ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ದುಷ್ಪಾರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸ್ಚಚ್ಛ ಭಾರತ-ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಿರುಚಿತ್ರ ನಿರ್ಮಾಣ ಸ್ಪರ್ಧೆಗೆ ನನ್ನ ಕಸ ನನ್ನ ಜವಾಬ್ದಾರಿ, ಹಾಗೂ ಪ್ಲಾಸ್ಟಿಕ್ ಬಳಕೆ ವಿನಾಶಕ್ಕೆ ದಾರಿ ಎಂಬ ವಿಷಯಗಳನ್ನು ನೀಡಲಾಗಿತ್ತು. ಸಾರ್ವಜನಿಕರಿಂದ  ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿರುತ್ತದೆ. ಒಟ್ಟು 26 ಮಂದಿ ಕಿರುಚಿತ್ರ ತಯಾರಿಸಿ ಅರ್ಜಿಯನ್ನು ಸಲ್ಲಿಸಿದ್ದರು.

     ಕಿರುಚಿತ್ರಕ್ಕೆ ಗರಿಷ್ಠ ಅವಧಿ 3 ನಿಮಿಷ (180 ಸೆಕೆಂಡ್ಸ್) ನಿಗದಿಪಡಿಸಲಾಗಿತ್ತು. ಕಿರುಚಿತ್ರದಲ್ಲಿ ಅಳವಡಿಸಲಾದ ಕ್ರಿಯಾಶೀಲತೆ, ಒಳಗೊಂಡಿರವ ಸಂದೇಶ, ಕಿರುಚಿತ್ರದ ಗುಣಮಟ್ಟ ಹಾಗೂ ಕಿರುಚಿತ್ರದ ಒಟ್ಟು ಅವಧಿಯನ್ನು ಪರಿಗಣಿಸಿ ಪರಿಗಣಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಪರ್ಧಿಗಳನ್ನು ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಜಿ.ಪಂ ಉಡುಪಿ ಇವರ ಅಧ್ಯಕ್ಷತೆಯ ಸಮಿತಿಯಲ್ಲಿ ತಿರ್ಮಾನಿಸಲಾಯಿತು. ಈ ಕೆಳಗಿನ ಸ್ಪರ್ಧಿಗಳು ವಿಜೇತರಾಗಿ ಆಯ್ಕೆಯಾಗಿರುತ್ತಾರೆ.

1.            ಪ್ರಥಮ: ಅವಿಲ್ ರೆಂಜಾಳ

2.            ದ್ವೀತಿಯ: ಭಾಸ್ಕರ್ ಮಣಿಪಾಲ

3.            ತೃತೀಯ: ಸತ್ಯೇಂದ್ರ ಪೈ

ವಿಜೇತರಿಗೆ ಪ್ರಥಮ ಬಹುಮಾನ- 10,000/- ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ-7,000/-ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ, ತೃತೀಯಾ ಬಹುಮಾನ-5,000/- ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಆಯ್ಕೆ ಸಮಿತಿಯಲ್ಲಿ  ಶ್ರೀಮತಿ ಪ್ರಸನ್ನ ಪ್ರಸಾದ್ ಭಟ್ ಹಾಗೂ ಶ್ರೀ ಅಕ್ಷಯ್ ಕಾಮತ್ ಇವರ ಚಿತ್ರಗಳನ್ನು ಕ್ರಿಯಾಶೀಲ ಕಿರುಚಿತ್ರಗಳು ಎಂದು ಪರಿಗಣಿಸಿ ಉತ್ತಮ ಚಿತ್ರ ಪ್ರಶಸ್ತಿ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರಗಳನ್ನು ನೀಡಲು ತಿರ್ಮಾನಿಸಲಾಗಿರುತ್ತದೆ  ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಾಣಧಿಕಾರಿ ಪ್ರೀತಿ ಗೆಹಲೋತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.