ಉಡುಪಿ:  ದಿನಾಂಕ : 18-06-2020 , ರಂದು ಬೆಳಿಗ್ಗೆ 10-15 ರಿಂದ 01-30 ರವರೆಗೆ ಉಡುಪಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಇಂಗ್ಲೀಷ ಪರೀಕ್ಷೆ 27 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.  ಪರೀಕ್ಷೆಗೆ ಒಟ್ಟು 13563 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿರುತ್ತಾರೆ. 6414 ಬಾಲಕರು ವಿದ್ಯಾರ್ಥಿಗಳು  7149 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ..  

ಕೋವಿಡ್-19 ಹಿನ್ನಲೆಯಲ್ಲಿ ವಿದ್ಯಾರ್ಥಿಗಳನ್ನು ಸೋಂಕು ಲಕ್ಷಣಗಳನ್ನು ಪರೀಕ್ಷಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಬೇಕಾಗಿರುವುದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ಬೆಳಿಗ್ಗೆ 09.00 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಇರಲು ಸೂಚಿಸಲಾಗಿದೆ.  

ಜಿಲ್ಲೆಯಲ್ಲಿ ನಡೆಯುವ ದ್ವಿತೀಯ ಪಿಯುಸಿ ಇಂಗ್ಲಿಷಯ ಪರೀಕ್ಷೆಯ ಮಾಹಿತಿಯನ್ನು ಪಡೆಯಲು ಸಾರ್ವಜನಿಕರಿಗೆ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ : 0820-2575891  ಮೊ: 8073518118.          

ಹೆಚ್ಚುವರಿ ಬ್ಲಾಕ್ : ಕಾರ್ಕಳ ತಾಲೂಕಿನಲ್ಲಿ ಎಸ್.ವಿ.ಟಿ. ಪದವಿ ಪೂರ್ವ ಕಾಲೇಜು, ಕಾರ್ಕಳ, ಇವರು ಎಸ್.ವಿ.ಟಿ. ಪ್ರಥಮ ದರ್ಜೆ ಕಾಲೇಜು, ಕಾರ್ಕಳ, ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಕಾರ್ಕಳ : ಇವರು ಕ್ರೈಸ್ಟಕಿಂಗ್ ಪದವಿ ಪೂರ್ವ ಕಾಲೇಜು, ಕಾರ್ಕಳ  ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲಕಟ್ಟೆ ಇವರು ಅದೇ ಕಾಲೇಜಿನ ಕರ್ನಾಟಕ ಪಬ್ಲಿಕ ಶಾಲೆ, ಬಿದ್ಕಲಕಟ್ಟೆ . ಈ 03 ಹೆಚ್ಚುವರಿ ಬ್ಲಾಕ್‍ಗಳನ್ನು ಮಾಡಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ 03  ಪರೀಕ್ಷಾ ಕೇಂದ್ರಗಳ ವಿವರ. 1) ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ : 847 2) ಭಂಡಾರ್ಕಸ್ ಪದವಿ ಪೂರ್ವ ಕಾಲೇಜು, ಕುಂದಾಪುರ : 844 3) ಎಂ.ಜಿ.ಎಂ. ಪದವಿ ಪೂರ್ವ ಕಾಲೇಜು, ಉಡುಪಿ : 771

ಹೊರ ಜಿಲ್ಲೆಯಗಳಿಂದ ಉಡುಪಿ ಜಿಲ್ಲೆಗೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆ : 163 ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ : 1344 ಇರುತ್ತದೆ.

ಒಂದು ವೇಳೆ ವಿದ್ಯಾರ್ಥಿಗಳಿಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಿ ಪರೀಕ್ಷೆ ಬರೆಯಲು ಅನಾನುಕೂಲವಾದರೆ ಅವರು  ಬಯಸಿದರೆ ಈ ಹಿಂದೆ ಪರೀಕ್ಷೆ ಬರೆದ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ.

ಜಿಲ್ಲೆಯಿಂದ ಹೊರ ಮತ್ತು ಒಳ ಬರುಹೋಗುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಗುರುತಿನ ಪತ್ರ ನೀಡಲಾಗುತ್ತದೆ. ಇದೊರೊಂದಿಗೆ ವಿದ್ಯಾರ್ಥಿಯ ಈ ಮೊದಲಿನ ಪ್ರವೇಶ ಪತ್ರ ಸಹ ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಏಕೆಂದರೆ ಹೊಸ ಗುರುತಿನ ಪತ್ರದಲ್ಲಿ ಫೋಟೋ ಇರುವದಿಲ್ಲ.

ಇ ಪಾಸ್ ಜಿಲ್ಲೆಗೆ ಹೊರ ರಾಜ್ಯದಿಂದ ಬರುವ 23 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಇರುತ್ತಾರೆ. 11 ವಿದ್ಯಾರ್ಥಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಇವರಿಂದ ಇ -ಪಾಸ್ ನೀಡಲಾಗಿದೆ.

ಕಾಯ್ದಿರಿಸಿದ ಹೆಚ್ಚವರಿ ಪರೀಕ್ಷಾ ಕೇಂದ್ರಗಳು : ಕೋವಿಡ್-19 ಹಿನ್ನಲೆಯಲ್ಲಿ ಯಾವುದಾದರೂ ಪರೀಕ್ಷಾ ಕೇಂದ್ರ ಕಂಟೇನ್ಮೇಂಟ ಜೋನ ಆಗಿ ಪರಿವರ್ತನೆಯಾದರೆ 03 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಕಾಯ್ದಿರಿಸಲಾಗಿದೆ. ಅವುಗಳೆಂದರೆ, ಉಡುಪಿ ತಾಲೂಕಿನಲ್ಲಿ ಡಾ: ಜಿ ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಉಡುಪಿ. ಕಾರ್ಕಳ ತಾಲೂಕಿನಲ್ಲಿ ಜ್ಞಾನ ಸುಧಾ ಪದವಿ ಪೂರ್ವ ಕಾಲೇಜು, ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ವೆಂಕಟರಮಣ ಪದವಿ ಪೂರ್ವ ಕಾಲೇಜು, ಕುಂದಾಪುರ.

ಬಸ್ ವ್ಯವಸ್ಥೆ : ಜಿಲ್ಲೆಯಲ್ಲಿ ಸಂಪೂರ್ಣವಾಗಿ ಬಸ್ ಸಂಚಾರ ಇಲ್ಲದಿರುವುದರಿಂದ ಒಟ್ಟು 69 ಮಾರ್ಗಗಳಲ್ಲಿ 91  ಕೆ.ಎಸ್.ಆರ್.ಟಿ. ಬಸ್‍ಗಳನ್ನು ಬಳಸಲಾಗುತ್ತದೆ. ಈ ಬಸ್‍ಗಳಲ್ಲಿ ಪ್ರತಿ ಮಾರ್ಗದಲ್ಲಿ ಓರ್ವ ಉಪನ್ಯಾಸಕರನ್ನು ಮಾರ್ಗಾಧಿಕಾರಿಗಳಾಗಿ ಕರ್ತವ್ಯನಿರ್ವಹಿಸುತ್ತಾರೆ. ಹಾಗೂ ಪ್ರತಿ ತಾಲೂಕಿನಲ್ಲಿ 04 ಜನ ಪ್ರಾಂಶುಪಾಲರು ನೋಡಲ್ ಅಧಿಕಾರಿಗಳಾಗಿ ಬಸ್ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ.  ಹಾಗೂ ವಿದ್ಯಾರ್ಥಿಗಳು, ಮಳೆಗಾಲದ ಅವಧಿಯಲ್ಲಿ ಅತ್ಯಂತ ಕುಗ್ರಾಮ ಹಾಗೂ ದೂರದ ಪ್ರದೇಶಗಳಿಂದ ಪರೀಕ್ಷಾ ಕೇಂದ್ರಗಳಿಗೆ ಬರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಸಾಧ್ಯವಾಗದಿದ್ದರೆ ಮತ್ತು ಬಸ್ ತಪ್ಪಿಸಿ ಕೊಂಡರೆ ಅಂತಹ ವಿದ್ಯಾರ್ಥಿಗಳನ್ನು ಸರಕಾರಿ ವಾಹನದಲ್ಲಿ ಕರೆದುಕೊಂಡು ಬರಲು ಎಲ್ಲಾ ತಾಲೂಕುಗಳಲ್ಲಿ ಸರಕಾರಿ ಕಚೇರಿಯ ವಾಹನಗಳು ತಯಾರಿಯಲ್ಲಿ ಇಡಬೇಕೆಂದು ಎಲ್ಲಾ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿರುತ್ತಾರೆ.

ಪರೀಕ್ಷಾ ಕೇಂದ್ರದ ಸ್ಯಾನಿಟ್ಯಾಜ್ : ಪರೀಕ್ಷಾ ಕೇಂದ್ರಗಳಿಗೆ ಸೋಂಕು ನಿವಾರಣಾ ದ್ರಾವಣ ಸಿಂಪಡಿಸಿ ಪರೀಕ್ಷಾ ಕೇಂದ್ರದ ಕೊಠಡಿ ಮತ್ತು ಡೆಸ್ಕಗಳನ್ನು ಸ್ವಚ್ಛಗೊಳಿಸಿ ಶುದ್ಧಿಕರಿಸಲಾಗಿದೆ. ಪರೀಕ್ಷಾ ಕೇಂದ್ರದ ಒಳಗೆ ಬರುವಾಗ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಿಬ್ಬಂದಿಗಳಿಂದ ಥರ್ಮಲ್ ಸ್ಕ್ಯಾನರನಿಂದ ಪರೀಕ್ಷಿಸಿ, ನೀರು ಮತ್ತು ಸಾಬುನಿನಿಂದ ಕೈತೊಳೆದು ಪರೀಕ್ಷಾ ಕೊಠಡಿಗೆ ಮಾಸ್ಕ ಧರಿಸಿಕೊಂಡು ಪ್ರವೇಶ ನೀಡಲಾಗುವುದು.

ಜ್ವರ / ಕೆಮ್ಮು ನೆಗಡಿ ಇತ್ಯಾದಿಗಳಿರುವುದು ಲಕ್ಷಣಗಳನ್ನು ಕಂಡು ಬಂದ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಅವರನ್ನು ಪ್ರತ್ಯೇಕವಾದ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ.  ಎಂದು ಜಿಲ್ಲಾ ಉಪನಿರ್ದೇಶಕರಾದ ಶ್ರೀ ಭಗವಂತ ಕಟ್ಟಿಮನಿ ಇವರು ಪತ್ರಿಕಾ ಪ್ರಕಟಣೆ ನೀಡಲಾಗಿದೆ.