ಉಳ್ಳಾಲ:- "ನಮ್ಮ ಹೋರಾಟ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ವಿರುದ್ಧವಾಗಿದೆ" ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಝಾಝ್ ಫರಂಗಿಪೇಟೆ ಹೇಳಿದರು. ಅವರು ಎಸ್ ಡಿಪಿಐ ಉಳ್ಳಾಲ ಅಳೇಕಲ ಸಮಿತಿಯ ನೂತನ ಕಚೇರಿ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಯಾಗಿ ಭಾಗವಹಿಸಿ ಮಾತನಾಡಿದರು.
"ಎಸ್ ಡಿಪಿಐ ಪಕ್ಷದ 11ವರ್ಷ ಗಳ ಬೆಳವಣಿಗೆಯನ್ನು ನೋಡಿ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ನಾಯಕರಿಗೆ ತಲೆ ನೋವು ಉಂಟು ಮಾಡಿದೆ. ಎಸ್ ಡಿಪಿ ಪಕ್ಷದ ವಿರುದ್ಧ ಬೇರೆ ಬೇರೆ ತಂತ್ರಗಳನ್ನು ನಡೆಸಿ ಯಶಸ್ವಿಯಾಗಿಲ್ಲ ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿ ರಾತ್ರಿ ಹಗಲು ಹೋರಾಟ ಮಾಡಿದ್ದಾರೆ. ನಾವು ಯಾವತ್ತು ಸೋಲಲ್ಲ" ಎಂದು ಹೇಳಿದರು.
ಅಲ್ ಇಂಡಿಯಾ ಇಮಾಂ ಕೌಂನ್ಸಿಲ್ ಅಧ್ಯಕ್ಷ ಜಾಫರ್ ಸ್ವಾದಿಕ್ ಫೈಝಿ ನೂತನ ಕಚೇರಿಯನ್ನು ಉದ್ಘಾಟಿಸಿ ದುವಾಶಿರ್ವಚನಗೈದರು. ಈ ಸಂದರ್ಭ ಎಸ್ ಡಿ ಪಿಐ ಪಕ್ಷದ ಟಿ ಸಟ್೯ ಬಿಡುಗಡೆಗೊಳಿಸಿದರು.
ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅತ್ತಾವುಲ್ಲ ಜೋಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಎಸ್ ಡಿಪಿಐ ಪಕ್ಷದ ಬೆಂಬಲಿಗರ ಸಂಖ್ಯೆ ಹೆಚ್ಚಿದ್ದಾರೆ ಎಂದು ಉಳ್ಳಾಲ ನಗರ ಸಭೆಯ ಚುನಾವಣೆಯ ಫಲಿತಾಂಶದಿಂದ ತಿಳಿದು ಬರುತ್ತಾದೆ. ಎಸ್ ಡಿಪಿಐ ಪಕ್ಷಕ್ಕೆ ಉತ್ತಮ ಭವಿಷ್ಯ ಇದೆ ಎಂದು ಹೇಳಿದರು.
ಎಸ್ ಡಿಪಿಐ ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ ಎ.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ತಂಝಿಲ್ ಉಳ್ಳಾಲ, ಸಿದ್ದೀಕ್ ಯು.ಬಿ, ಅಬ್ಬಾಸ್ ಕಿನ್ಯಾ, ಅಬ್ದುಲ್ ಲತೀಫ್ ಕೋಡಿಜಾಲ್, ರವೂಫ್ ಉಳ್ಳಾಲ್, ಇಂತಿಯಾಝ್ ಕೋಟೆಪುರ, ಮುಸ್ಲಿಂ ಒಕ್ಕೂಟದ ಇಸ್ಮಾಯಿಲ್ ಉಳ್ಳಾಲ್ , ಮುಖಂಡ ಝಾಕೀರ್ ಹುಸೈನ್ ಉಳ್ಳಾಲ್, ಉಳ್ಳಾಲ ನಗರ ಸಭೆ ಸದಸ್ಯ ಇಕ್ಬಾಲ್ ಕೋಟೆಪುರ ಉಪಸ್ಥಿತರಿದರು.
ಉಳ್ಳಾಲ ನಗರ ಸಭೆ ಸದಸ್ಯ ಆಸ್ಗರ್ ಅಲಿ ಸ್ವಾಗತಿಸಿದರು, ಉಳ್ಳಾಲ ನಗರ ಸಭೆ ಸದಸ್ಯ ರವೂಫ್ ಉಳ್ಳಾಲ ವಂದಿಸಿದರು. ಕಾರ್ಯಕರ್ತ ನೌರೀಷ್ ಅಳೇಕಲ ಕಾರ್ಯಕ್ರಮ ನಿರೂಪಿಸಿದರು.