ಮಂಗಳೂರು:- "ಉಳ್ಳಾಲ ನಗರಸಭೆ ವಾರ್ಡು 18ರ ಚುನಾಯಿತ ಸದಸ್ಯನಾಗಿದ್ದು, ಸಪ್ಟೆಂಬರ್ 2018 ರಲ್ಲಿ ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದಿರುವೆನು. ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ನಗರಸಭೆಯ 18ನೇ ವಾರ್ಡಿನ ಗಂಡಿ ಪ್ರದೇಶವು ಗುಡ್ಡಗಾಡುಗಳಿಂದ ಕೂಡಿದ್ದು ಇಲ್ಲಿನ ಜನರು ಬಡತನದಿಂದ ಕೂಡಿದ್ದು ಸರಕಾರದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುವ 95% ಜನರು ಬಿಪಿಎಲ್ ಕುಟುಂಬದವರಾಗಿದ್ದಾರೆ. 10 ವರ್ಷದ ಮೊದಲು ಈ ಪ್ರದೇಶಕ್ಕೆ ಕೆಯುಡಿಎಫ್ಸಿ / ಪಿಡಬ್ಲ್ಯೂಡಿ | ಪಂಚಾಯತ್‌ನವರು ಅನುದಾನ ಮೀಸಲಿಟ್ಟ ನಂತರ ಯಾವುದೇ ಅನುದಾನ ಈ ಪ್ರದೇಶಕ್ಕೆ ಬಂದಿಲ್ಲ".

"2017ರಲ್ಲಿ ಈ ವಾರ್ಡಿನ ಗಂಡಿ ಹಾಗೂ ಅಡ್ಡ ರಸ್ತೆಗಳ ಅಂದಾಜುವೆಚ್ಚ ರೂ.50 ಲಕ್ಷ ಅಭಿವೃದ್ಧಿ ಕಾಮಗಾರಿ ನಗರೋತ್ಥಾನ ಹಂತ 3ರಲ್ಲಿ ಉಳ್ಳಾಲ ನಗರಸಭೆ ನಿರ್ಣಯಿಸಿ, ತಾಂತ್ರಿಕ ಮಂಜೂರಾತಿ ನೀಡಿ ಮೇ 2018ರಲ್ಲಿ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿತ್ತು ಹಾಗೂ ಈ ಕಾಮಗಾರಿಗೆ ಜನವರಿ 2018ರಲ್ಲಿ ವಿಧಾನಸಭಾ ಚುನಾವಣೆಯ ಮೊದಲು ಗುದ್ದಲಿ ಪೂಜೆ ನಡೆದು ಶಂಕುಸ್ಥಾಪನೆಯನ್ನು ನಡೆಸಲಾಗಿತ್ತು. ಆದರೆ ಬೇಕೆಂತಲೇ ಈ ಕಾಮಗಾರಿಯನ್ನು ಇಷ್ಟರವರೆಗೆ ಕೈಗೊಳ್ಳಲಿಲ್ಲ".

"ಕಳೆದ 3 ವರ್ಷದಿಂದ ಊರಿನವರು ಹಾಗೂ 2 ವರ್ಷದಿಂದ ಈ ಪ್ರದೇಶದ ಚುನಾಯಿತ ಕೌನ್ಸಿಲರ್ ಆಗಿ  ಎಷ್ಟೇ ಪ್ರಯತ್ನಿಸಿದರೂ ಈ ಕಾಮಗಾರಿಯನ್ನು ಮೀಸಲಿಟ್ಟ ಅನುದಾನದಿಂದ ಕೈಗೊಂಡಿಲ್ಲ. 2 ವರ್ಷದಿಂದ 18ನೇ ಗಂಡಿ ವಾರ್ಡಿಗೆ ಎಸ್‌ಎಫ್ಸಿ ಅನುದಾನ. 14ನೇ ಹಣಕಾಸು, ಪಂಚಾಯತ್ ಅನುದಾನದಿಂದಾಗಲೀ, ಎಸ್‌ಎ/ಎಸ್‌ಟಿ, MP ಫಂಡ್‌ನಿಂದಾಗಲೀ, MLA ಫಂಡ್ ನಿಂದಾಗಲೀ MTC ಫಂಡ್ ನಿಂದಾಗಲೀ, ಹಣವನ್ನು ಮೀಸಲಿಡದೆ ತಾರತಮ್ಯ ಎಸಗಿದ್ದಾರೆ ಇದರಿಂದಾಗಿ ಈ ಪ್ರದೇಶದ ಬೆಳವಣಿಗೆ ಎಲ್ಲಾರಲ ತಾಗಿದರೆ ಅನ್ಯಾಯವಾಗಿದೆ". 

"ಕುಡಿಯುವ ನೀರಿನ ಬಗ್ಗೆ ವಿದ್ಯುತ್ ಕಂಬ ಮತ್ತು ಲೈಟ್ ಗಂಡಿ ಕೆರೆ ಎಸ್ ಸಿ ಎಸ್ ಟಿ ಅನುಧಾನ ಪ್ರಾಕೃತಿಕ ವಿಕೋಪ, ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಊರಿನ ಜನರು ಮತ್ತು ನಾನು ಗಂಡಿಯಲ್ಲಿ ಹಾಗೂ ನಗರಸಭೆ ಎದುರುಗಡೆ ಪ್ರತಿಭಟನೆ ನಡೆಸಿದ್ದರೂ ಕೂಡಾ ಯಾರು ಇದರ ಬಗ್ಗೆ ಗಮನಹರಿಸಿಲ್ಲ".

"ಕಳೆದ 10 ವರ್ಷದಿಂದ ಮೂಲಭೂತ ಸೌಕರ್ಯ ಒದಗಿಸದೆ ಇರುವುದರಿಂದ ಈ ಪ್ರದೇಶದಲ್ಲಿ ವಾಹನ ಸಂಚಾರ ಹಾಗೂ ಜನರಿಗೆ ಓಡಾಡಲು ಅಸಾಧ್ಯವಾಗಿದೆ. ತುರ್ತು ಸಂದರ್ಭದಲ್ಲಿ ಕುಡಿಯುವ ನೀರಿನ ಟ್ಯಾಂಕರ್, ಅಂಬ್ಯುಲೆನ್ಸ್ ಹಾಗೂ ಹೊಸ ಮನೆಯನ್ನು ಕಟ್ಟಲು, ಹಳೆ ಮನೆ ರಿಪೇರಿ ಕೂಡಾ ಸಾಧ್ಯವಾಗುತ್ತಿಲ್ಲ. ಈ ಪ್ರದೇಶದಲ್ಲಿರುವ ಅಂಗನವಾಡಿಯನ್ನು ಕೂಡಾ ಸದ್ಯದಲ್ಲೇ ಮುಚ್ಚುವ ಪರಿಸ್ಥಿತಿ ಬಂದಿದೆ. ಕರ್ನಾಟಕ ರಾಜ್ಯದ ಎಲ್ಲಾ ಹಳ್ಳಿ ಪ್ರದೇಶವೂ ಅಭಿವೃದ್ಧಿ ಹೊಂದುತ್ತಿದ್ದು ಉಳ್ಳಾಲ ನಗರಸಭೆಯ ಗಂಡಿ ವಾರ್ಡಿಗೆ ಮಾತ್ರ ಯಾವುದೇ ಅನುದಾನ ಮೀಸಲಿಡದೆ ತಾರತಮ್ಯ ಎಸಗಲು ಕಾರಣವೇನು?"

"ಉಳ್ಳಾಲ ನಗರಸಭೆಗೆ 2 ವರ್ಷದಿಂದ ಸುಮಾರು ರೂ.60ಕೋಟಿಯಷ್ಟು ಅನುದಾನ ಬಂದರೂ ಕೂಡಾ 18ನೇ ಗಂಡಿ ಎ ಒಂದು ರೂಪಾಯಿ ಕೂಡಾ ಮೀಸಲಿಡಲಿಲ್ಲ,"

"ಆದುದರಿಂದ ಸಂಬಂಧಪಟ್ಟ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು, ಪೌರಾಯುಕ್ತರು ಇಂಜಿನೀಯರ್ ಕೂಡಲೇ ಇದಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಇದರಿಂದಾಗುವ ಹಾನಿಗೆ ಹಾಗೂ ಅನ್ಯಾಯಕ್ಕೆ ತಾವೇ ಜವಾಬ್ದಾರರು | ಎಂದು ಈ ಮೂಲಕ ಪತ್ರಿಕಾ ಪ್ರಕಟಣೆ ನೀಡುತ್ತಿದ್ದೇನೆ"ಎಂದು ಮಾಜಿ ಅಧ್ಯಕ್ಷರು ದಿನಕರ ಉಳ್ಳಾಲ್ ಹಾಗೂ ಸದಸ್ಯರು  ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.