ಮಂಗಳೂರು:- ಮಂಗಳೂರು ನಗರದಲ್ಲಿ ಬಸ್ ಪ್ರಯಾಣವನ್ನು ಪುನರುಜೀವನಗೊಳಿಸುವ ಸಲುವಾಗಿ ಚಲೋ ಆಪ್ ಮತ್ತು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘವು ಪರಸ್ಪರ ಕೈಜೋಡಿಸಿಕೊಂಡಿವೆ. ದ.ಕ.ಬಸ್ ಮಾಲಕರ ಸಂಘದ ತಾಂತ್ರಿಕ ಪಾಲುದಾರನಾಗಿರುವ ಚಲೋ ಬಸ್ ಪ್ರಯಾಣದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ನೂತನ ತಂತ್ರಜ್ಞಾನಗಳನ್ನು ಬಸ್ ನಿರ್ವಾಹಕರಿಗೆ ಮತ್ತು ಪ್ರಯಾಣಿಕರಿಗೆ
ಮರಿಚಯಿಸಲಿದೆ. ಇತ್ತೀಚೆಗೆ ಬಸ್ ನಿರ್ವಾಹಕರಿಗಾಗಿ ಪರಿಚಯಿಸಲ್ಪಟ್ಟ ಇಂಧನ ದರ ಕಡಿತದ - ಯಜನೆಯ ಜೊತೆಗೆ ಇನ್ನೂ ಹಲವಾರು ಯೋಜನೆಗಳು ಮುಂದಿನ ದಿನಗಳಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ.
ಈ ಉಪಕ್ರಮದ ಒಂದು ಭಾಗವಾಗಿ ಚಲೋ ಆ್ಯಪ್ ಈಗಾಗಲೇ ಸೂಪರ್ ಉಳಿತಾಯದ ಪ್ಲಾನ್‌ಗಳನ್ನು ಹೊಂದಿರುವ ಚಲೋ ಕಾರ್ಡ್ ಮತ್ತು ಚಲೋ ಆ್ಯಪ್‌ನಲ್ಲಿ ಬಸ್‌ಗಳನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಗಳನ್ನು ಪ್ರಾಯೋಗಿಕವಾಗಿ ಮಂಗಳೂರಿನಲ್ಲಿ ಜಾರಿಗೆ ತಂದಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಉಪಕ್ರಮದ ಬಗ್ಗೆ ಮಾತನಾಡುತ್ತಾ, ಚಲೋದ ಕಾರ್ಯಾಚರಣೆಯ ಉಪಾಧ್ಯಕ್ಷರಾದ ಅರುಣ್ ಗಿದ್ರೋನಿಯಾರವರು “ದ.ಕ. ಬಸ್ ಮಾಲಕರ ಸಂಘದವರ ನಿರಂತರ ಸಹಕಾರ ಮತ್ತು ಬಸ್ ನಿರ್ವಹಣೆಯನ್ನು ಉತ್ತಮಗೊಳಿಸಲು ಅವರು ಹೊಂದಿರುವ ಬದ್ಧತೆಗೆ ನಾವು ಆಭಾರಿಯಾಗಿದ್ದೇವೆ. ಮಂಗಳೂರಿನಲ್ಲಿ ಬಸ್ ಪ್ರಯಾಣದ ಅವಧಿಯನ್ನು ಕಡಿಮೆ ಗೊಳಿಸಿ, ಎಲ್ಲರಿಗೂ ಅನುಕೂಲಕರವಾಗುವಂತೆ ಮಾಡಿ, ನಾಗರಿಕರು ಬಸ್ ಪ್ರಯಾಣಕ್ಕೆ ಆದ್ಯತೆ ನೀಡುವಂತೆ ಮಾಡುವತ್ತ ನಾವು ನಮ್ಮ ಗಮನವನ್ನು ಕ್ರೋಢೀಕರಿಸಿದ್ದೇವೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಬಸ್ ನಿರ್ವಾಹಕರ ಸಂಘದ ಜೊತೆಗೆ ಸಹಭಾಗಿತ್ವ ಹೊಂದಿರುವುದು ನಮಗೆ ಅತೀವ ಸಂತಸವಾಗಿದೆ ಮತ್ತು ಪ್ರತಿಯೊಬ್ಬ ಪ್ರಯಾಣಿಕನೂ ಬಸ್ ಪ್ರಯಾಣದ ಉತ್ತಮ ಅನುಭವ ಹೊಂದುವುದೇ ನಮ್ಮ ಉದ್ದೇಶವಾಗಿದೆ” ಎಂದರು.
ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ದಿಲ್‌ರಾಜ್ ಆಳ್ವರವರು” ಸಿಟಿ ಬಸ್‌ಗಳನ್ನು ಡಿಜಿಟಲ್ ಪಾವತಿಯು ಈಗಿನ ಅವಶ್ಯಕತೆಗಳಲ್ಲಿ ಒಂದಾಗಿದ್ದು, ಇದು ಬಸ್ ಪ್ರಯಾಣವನ್ನು ಸಂಪರ್ಕ ರಹಿತ ಗೊಳಿಸುವುದರೊಂದಿಗೆ ಎಲ್ಲರಿಗೂ ಸುರಕ್ಷಿತವಾಗಿರುತ್ತದೆ. ಈ ಸೂಪರ್ ಸೇವರ್ ಪ್ಲಾನ್‌ನಲ್ಲಿ ನೀಡಲಾಗುವ ಕೊಡುಗೆಗಳು ಸಾಮಾನ್ಯ ಜನರ ಕೈಗೆಟಕುವ ದರದಲ್ಲಿದ್ದು ನಾಗರಿಕರ ಬಸ್ ಪ್ರಯಾಣವನ್ನು ಸಂಪರ್ಕ ರಹಿತ ಮಾಡಿ ಅವರನ್ನು ವೈರಾಣುಗಳ ಅಪಾಯದಿಂದ ರಕ್ಷಿಸುತ್ತದೆ ಎಂದು ಹೇಳಿದರು.
“ಬಸ್ ಪ್ರಯಾಣದ ಬಗೆಗೆ ಆತಂಕದ ವಾತಾವರಣ ಇರುವಂತಹ ಈ ಸಮಯದಲ್ಲಿ, ಸೂಪರ್ ಸೇವರ್ ಪ್ಲಾನ್ ಜಾರಿಗೊಳಿಸುವುದರಿಂದ ನಾಗರಿಕರಿಗೆ ಡಿಜಿಟಲ್ ಪಾವತಿ ಮಾಡಲು ಅನುಕೂಲಕರ ವಾತಾವರಣ ನಿರ್ಮಿಸಿ ಕೊಟ್ಟು ಬಸ್ ಪ್ರಯಾಣವನ್ನು ಹೆಚ್ಚು ಸುರಕ್ಷಿತವಾಗಿರಿಸುವಲ್ಲಿ ಸಹಕಾರಿಯಾಗಿದೆ. ಚಲೋ ಕಾರ್ಡ್ ಮತ್ತು ಸೂಪರ್ ಸೇವರ್ ಅಸ್ತಿತ್ವದಲ್ಲಿರುವ ಸಂಪರ್ಕವಿಲ್ಲದ ಪರಿಹಾರಗಳಿಗೆ ಪೂರಕವಾಗಿದೆ ಮತ್ತು ಬಸ್ ಪ್ರಯಾಣವನ್ನು ಹೆಚ್ಚು ಕೈಗೆಟಕುವಂತೆ ಮಾಡುತ್ತದೆ” ಎಂದು ದ. ಕ. ಬಸ್ ಮಾಲಕರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೇಖರವರು ಅಭಿಪ್ರಾಯ ಪಟ್ಟರು.
ಚಲೋ ಆ್ಯಪ್‌ನವರು ನಡೆಸಿದ ಸಮೀಕ್ಷೆಯಂತೆ ಬಸ್‌ಗಳಲ್ಲಿ ನಗದು ವ್ಯವಹಾರವನ್ನು ನಿರ್ಮೂಲನೆ ಮಾಡುವುದರಿದ ವೈರಾಣುಗಳು ಹರಡುವುದನ್ನು 95%ರಷ್ಟು ಕಡಿಮೆ ಮಾಡಬಹುದು ಮತ್ತು ಇದರಿಂದಾಗಿ ಬಸ್ ಪ್ರಯಾಣವು 20ಪಟ್ಟು ಅಧಿಕ ಸುರಕ್ಷಿತವಾಗಿರುವುದು. ಸೂಪರ್ ಸೇವರ್ ಪ್ಲಾನನ್ನು ನಾಗರಿಕರಿಗೆ ನೀಡುವ ಮೂಲಕ ಬಸ್ ಪ್ರಯಾಣವು ಸುರಕ್ಷಿತವಾಗಿರುವುದು. ಹೆಚ್ಚಿನ ವಿವರಗಳಿಗಾಗಿ 9141134640 ಸಂಖ್ಯೆಗೆ ಕರೆ ಮಾಡಿ ಅಥವಾ https://chalo.com/mangaluru ಗೆ ಭೇಟಿ ಮಾಡಿ ಎ೦ದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.