ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ..ಸರಳ ಈದ್ ಆಚರಣೆ.
ನಾಡಿನ ಸಮಸ್ತ ಜನರಿಗೆ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು.
ಮುಸಲ್ಮಾನರ ಪಾಲಿಗೆ ರಂಝಾನ್ ತಿಂಗಳು ಪವಿತ್ರವಾದ ಪುಣ್ಯ ಮಾಸ. ವರ್ಷದ 12ತಿಂಗಳಲ್ಲಿ ಈ ರಂಝಾನ್ ತಿಂಗಳು ವಿಶೇಷವಾಗಿ ಪವಿತ್ರವಾದ ತಿಂಗಳೆಂಬ ನೆಲೆಯಲ್ಲಿ ಪ್ರವಾದಿವರ್ಯರ ನಿರ್ದೇಶನದಂತೆ ಅವರು ತೋರಿಸಿ ಕೊಟ್ಟಿರುವ ದಾರಿಯಲ್ಲಿ ನಾವು ಮುಂದುವರೆಯುತ್ತಾ 30ದಿನಗಳ ಉಪವಾಸವನ್ನು ಆಚರಿಸಿಕೊಂಡು ಪಾನೀಯ ಆಹಾರ ತ್ಯಜಿಸಿ ಸುಮಾರು ಹದಿನಾಲ್ಕು ಗಂಟೆಗಳ ಕಾಲ ಪ್ರತಿಯೊಬ್ಬ ಮುಸಲ್ಮಾನನೂ ಕೂಡ ನಿರಾಹಾರವಾಗಿ ಉಪವಾಸ ಆಚರಿಸುವುದು ಖಡ್ಡಾಯ. ಈದುಲ್ ಫಿತ್ರ್ ಹಬ್ಬದ ಸಂಭ್ರಮ ಅಂತ ಹೇಳುವ ಸಂದರ್ಭದಲ್ಲಿ ಒಂದು ಕೊರತೆಯ ಬಗ್ಗೆ ಚಿಂತನೆ ಮಾಡುವ ಅವಶ್ಯಕವಿದೆ.ನಾವು ನೀವೆಲ್ಲರೂ ಕಂಡರಿಯದಂತಹ ಒಂದು ಪರಿಸ್ಥಿತಿಯನ್ನು ನಾವು ಕಂಡಿದ್ದೇವೆ.
ಕಳೆದ 9 ಶುಕ್ರವಾರ ಜುಮಾ ನಮಾಝ್ ಇಲ್ಲದೆ ಮತ್ತು ಎರಡೂವರೆ ತಿಂಗಳು ಕಾಲ ಸಾಮೂಹಿಕ ನಮಾಝ್ ಇಲ್ಲದೆ, ನಮಾಝಿನಿಂದ ವಂಚಿತರಾಗಿ ಹಾಗೂ ಈದುಲ್ ಫಿತ್ರ್ ಹಬ್ಬದ ನಮಾಝ್ ಕೂಡ ನಮ್ಮಿಂದ ಇಲ್ಲದಾಗಿದೆ.ಇದಕ್ಕೆಲ್ಲ ಕಾರಣ ದೇವನ ಕಡೆಯಿಂದ ಕೊರೋನಾ ಪಸರಿಸಿದೆ, ಯಾಕಾಗಿ ಪಸರಿಸಿದೆ ಎಂಬುದರ ಬಗ್ಗೆ ನಾವು ಚಿಂತಿಸುವ ಕಾಲವಾಗಿದೆ.ನಮ್ಮ ಸುಖಕರ ಜೀವನಕ್ಕಾಗಿ ದೇವರ ಆಜ್ಞೆಯನ್ನು ಉಲ್ಲಂಘಿಸಿ, ಅಧಿಕ ಪ್ರಸಂಗಿತನ ತೋರಿಸಿದ್ದರಿಂದಾಗಿ ನಾವು ಕೆಟ್ಟ ವ್ಯವಸ್ಥೆಯಲ್ಲಿ ಹುದುಗಿ ಹೋಗಿದ್ದೇವೆ.ಇದರಿಂದ ದೇವರು ನಮ್ಮನ್ನು ರಕ್ಷಿಸಲಿ, ಈ ವೈರಸ್ ದೂರೀಕರಿಸುವಂತಾಗಲು ಪ್ರತಿಯೊಬ್ಬ ಮುಸಲ್ಮಾನನೂ ಕೂಡ ದೇವರಲ್ಲಿ ಪ್ರಾರ್ಥಿಸುವ ಅಗತ್ಯವಿದೆ.
ಈ ರಂಝಾನ್ ತಿಂಗಳು ಮುಸಲ್ಮಾನರ ಪಾಲಿಗೆ ಕೊನೆಯ ರಂಝಾನ್ ಆಗದೆ, ಇನ್ನೂ ಹಲವು ರಂಝಾನ್ ಮತ್ತು ಉಪವಾಸ, ಪ್ರಾರ್ಥನೆಗಳನ್ನು ಮಾಡುವಂತಹವ್ಯವಸ್ಥೆಗೆ ದೇವರು ನಮ್ಮೆಲ್ಲರನ್ನೂ ಅನುಗ್ರಹಿಸಲಿ, ಈ ಊರಿನ ಸರ್ವ ಧರ್ಮದ ಜನರು ಒಂದಾಗಿ ಬಾಳಿಕೊಂಡು, ಜಾತಿ ಧರ್ಮವನ್ನು ಬಿಟ್ಟು ನಾವೆಲ್ಲರೂ ಮಾನವ ಕುಲದ ಮಾನವೀಯತೆಯ ಸೃಷ್ಟಿಕರ್ತನ ಸೃಷ್ಟಿ ಎಂಬ ದೃಷ್ಟಿಯಲ್ಲಿ ನಮಗಿದ್ದಂತಹ ಅಲ್ಪ ಆಯುಷ್ಯದಲ್ಲಿ ಒಳ್ಳೆಯದನ್ನು ಮಾಡಿಕೊಂಡು ಇತರರಿಗೆ ಸಹಾಯ ಹಸ್ತವನ್ನು ಚಾಚುವುದರ ಮೂಲಕ ದೇವರ ಪ್ರೀತಿಗೆ ಪಾತ್ರರಾಗೋಣ ಎಂದು ಹೇಳಿದರು.