ಏಕ ಸೊಪಣ
ಆಭಾರ್ ತುಕಾ ಹಾಂವ.
ಏಕ ಸೊಪಣ ಮೆಗೆಲೆ
ವಿಸರ್ನಾಶಿ ವರಯಿಲೆ ಖಾತಿರ್.
ಏಕ ಸೊಪಣ ಆಶಿಲೆ ಮನಾಂತು
ಚಾನಿಣೆಚೆ ರಾತ್ತಿಂತು
ಸಮುದ್ರಾ ವೇಳ್ಯೇರಿ
ಹಾಂವ ಆನಿ ತೂ
ಹಾತ್ತಾಂತು ಹಾತ ಘೇವೂನ
ಚಲತ ವಚೂಕಾ.
ಚಲತ ವಚೂಕಾ.
ಜಾಲ್ಯಾರ್ ತೂ ಮಾಕಾ
ಮೆಳ್ಳೋಚ್ ನಾ.
ದೆಕೂನ..
ಆಭಾರ ಹಾಂವ ತುಕಾ
ಏಕ ಸೊಪಣ ಮೆಗೆಲೆ
ಅಜೂನ ವಿಸರ್ನಾಶಿ
ವರಯಿಲೆಕ.
ಏಕಾಂಗಿ
ಸಾಗರನ ವಿರಾಟ
ಒಂಟಿತನವನು ನೀಗಿಸುವರೇ
ಉಕ್ಕುವ ಭಾವದಲೆಗಳ
ಸಂತೈಸುವರೇ ಯಾರಾದರೂ!
ಅಲೆಗಳ ಗದ್ದಲದಲೂ
ಘನವಾದ ಮೌನ.
ಕೇಳಿಸೀತು ಕೇಳಿದರೆ ಗಮನವಿಟ್ಟು
ಹಗಲ ಬಿರು ಬಿಸಿಲ ಖಾಲಿತನ
ಇರುಳ ನೀರವ ಮೌನ
ಬಯಸದೇ ಸಾಂಗತ್ಯ ಮನ.
ಜಾತ್ರೆಯಂತಹ ಸಾಯಂಕಾಲ
ಅವರವರದೇ ಗೌಜು ಗದ್ದಲ
ಅಲೆಗಳ ಏರು ಇಳಿತಗಳಿಗೆ
ಮನದ ತಹಬಂದಿಯೊಳಗೆ
ಅವರವರೇ ತಲ್ಲೀನ.
ಬಂದೆಷ್ಟು ಗೋಗರೆದರೂ ದಡ ಜತೆಗೆ ಬರುವುದೇ.?
ಮೈಮರೆಯುವುದದು ಯಾತ್ರಿಕರ ಆನಂದದಾಟಗಳಿಗೆ.
ಸಾವಿರಾರು ನದಿಗಳು
ಸೇರಿಕೊಂಡರೂ..
ಒಬ್ಬರಾದರೂ ಇರುವರೇ
ಗೆಳತಿಯಂತೆ ಅಪ್ಪಿಕೊಳಲು.
ಬರುವಳೊಬ್ಬಾಕೆ ಆಗಸದಿಂದ
ಇಳಿದು ಸಾಗರನೆಡೆಗೆ
ಬೋರ್ಗರೆದು ಆವರಿಸುತ
ಅದೇನು ಮುನಿಸೋ..ತಿಳಿಯೆ
ಕ್ಷಣ ಮತ್ತೊಂದರಲಿ ಸೇರುತ್ತಾಳೆ
ಮತ್ತೆ ಮೋಡದ ಮರೆಗೆ.
ಪ್ರಬಲ ಪುರುಷನೊಳಗೂ
ಮೃದುಲ ಹೆಣ್ಮನಸು.
ಬೇಕೆನಿಸುವುದು ಅತ್ತು
ಬರಿದಾಗಲು ಒಂದು ಹೆಗಲು.
ಮತ್ತೆ ಮತ್ತೆ ಒಂಟಿ ಸಾಗರ.
ವಿರಹಿಯೋ, ವಿಧುರನೋ
ಕ್ಷಿತಿಜ ಮಿಲನಕೆ ಹಂಬಲಿಸುತ
ತನ್ನೊಳಗೆ ನಿಡುಸುಯ್ಯುತ.
तीनकोंसे बने पल
पल से बने लम्हे
और लम्होने वख्त को
बुना है
हर पल कोयी किसी के
साथ नही रेह सक्ता
ईसलिये खुदा ने यादोंको
चुना है..।
-- ಶೀಲಾ ಭಂಡಾರ್ಕರ್.