ಕಪ್ಪು ಮೋಡಗಳೇ ಬರಲಾದೀತೇ ಬಿಳಿಯಾಗಿ ನೀನು ?

ಇನಿಯನೆನ್ನ ಬರುವವನಿದ್ದ ಎದೆ ಕಂಪಿಸೆ ಆತಂಕವನು.

ಕತ್ತಲೆಯಲ್ಲಿ ಆತ ಬಲು ನಿಪುಣನು

ಆದರೆ ಇಲ್ಲಿ ಮುಟ್ಟಲು ಆಗು ಬಂಧು ನೀನು.


ಬಿಳಿ ಆತ ಕೆಂಪು ಮಾಡಬಲ್ಲನು

ಕೆಂಪಾದೊಡನೆ ರಸಗುಲ್ಲ ನಾನು

ಮೆದು ಮೃದು ನನ್ನಿನಿಯ ಸವಿಯುವನು.


ಕಪ್ಪು ಆಗಿಯೇ ಸುರಿಯುವೆ ಏನು?

ತಿಳಿದುಕೊ ಸೃಷ್ಟಿ ಕಾರ್ಯದ ಅಡಚಣೆ ನೀನು

ಬಿಳಿ ಮೋಡದಿ ಸುರಿದೊಮ್ಮೆ  ನೋಡು ಮಜವನು .


ಸಹೋದರ ಸಹೋದರಿ ಆಗೋಣವೇನು ?

ರಾಖಿ ಕಟ್ಟಲು ಕೊಡು ಇದೇ ಉಡುಗೊರೆಯನು .

ಬಾ ನೀನು ಬಿಳಿ ಮೋಡವಾಗಿನ್ನು ,

ಕಾಯುವ ಹೊಣೆ ನಿನಗೀಗ ತಂಗಿ ಸಂಸಾರವನ್ನು.


ಇನಿಯಾ ನೋಡಿನ್ನು..

ಮೋಡಗಳ ತೋರಣದ ಸಾಲನ್ನು

ವೇಗವಾಗಿ ಬಾ ....ನಿನ್ನವಳೇ  ಸಖಿ - ಸುಖ ಇನ್ನು..

ಬರುವಿರಲ್ಲಾ ಕಪ್ಪು ಮೋಡಗಳೇ ಬಿಳಿಯಾಗಿನ್ನು...?

-ರೇಮಂಡ್ ಡಿಕೂನ