ಮಂಗಳೂರು (ಅಕ್ಟೋಬರ್ 13):- ಸರ್ಕಾರಿ ಐ.ಟಿ.ಐ ಮಹಿಳಾ, ಕದ್ರಿಹಿಲ್ಸ್, ಮಂಗಳೂರು ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಿಪಿಪಿ ತರಬೇತಿ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡು ಎನ್.ಸಿ.ವಿ.ಟಿ. ಸಂಯೋಜನೆ ಪಡೆದ ಕಂಪ್ಯೂಟರ್ ಅಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಎಂ.ಆರ್.ಎ.ಸಿ. ವೃತ್ತಿಗಳಿಗೆ ಮ್ಯಾನೇಜ್‍ಮೆಂಟ್ ಸೀಟ್‍ಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಬಯಸುವ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಗೆ ಹಾಜರಾಗಿ ಅಕ್ಟೋಬರ್ 23 ರೊಳಗೆ ಪ್ರವೇಶ ಪಡೆದುಕೊಳ್ಳಬೇಕು.  

     ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಐ.ಟಿ.ಐ ಮಹಿಳಾ, ಕದ್ರಿ ಹಿಲ್ಸ್ ಮಂಗಳೂರು, ದೂ.ಸಂ: 0824-2216360, 9845226485 ನ್ನು ಸಂಪರ್ಕಿಸಲು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.