ಲೇಖಕ
-ರೋಶನ್ ಫೆರ್ನಾಂಡಿಸ್

ಎಂದಿನಂತೆ ನನ್ನ ಮನೆಯ ಕಿಟಕಿ ಇಂದ ಒಂದು ಸಲ ಕಣ್ಣು ಹಾಯಿಸುತ್ತ ,ನಾಲಕ್ಕು ದಿಕ್ಕುಗಳಿಗೆ ಎದ್ದು ನಿಂತಿರುವ ಬಹು ಮಹಡಿ ಕಟ್ಟಡ ಗಳು ,ಕಾಂಕ್ರೀಟ್ ರಸ್ತೆ ಗಳು ಮತ್ತು ಕೃತಕ ಮರ ಗಿಡ ಗಳು ನೋಡುತ್ತಿರವಾಗ , ಒಮ್ಮೆಗೆ ನನ್ನ ದೃಷ್ಟಿ ಕಿಟಕಿ ಸಂದಿನಲ್ಲಿ ಇರುವ ಗೂಡಿನ ಮೇಲೆ ಬಿತ್ತುಸಾಮಾನ್ಯವಾಗಿ ಹಳ್ಳಿ ಗಾಡಿನಲ್ಲಿ  ಪಕ್ಷಿಗಳು ಮೊಟ್ಟೆ ಇಡಲು ಒಣ ಕಡ್ಡಿಬಳ್ಳಿ ಉಪಯೋಗಿಸಿ ಗೂಡು ಕಟ್ಟಿದರೆ ಸಣ್ಣ  ಪಕ್ಷಿ ವಿಶೇಷವಾಗಿ ಕಾಂಕ್ರೀಟ್ ಸಿಟಿಯಲ್ಲಿ  ಕಬ್ಬಿಣದ ತಂತಿ ಇಂದ ಗೂಡು ಕಟ್ಟುತಿತ್ತು ಸಣ್ಣ ಪಕ್ಷಿಯು ಮನುಷ್ಯನ ಕೈಗೆ ಎಟುಕದ ಎತ್ತರದ ಜಾಗ ಮತ್ತು ಗೂಡು ಕಟ್ಟಲು ತಂತಿ ಯುಪಯೋಗಿಸುದನ್ನು ನೋಡಿದಾಗ ತುಂಬಾನೇ ಆಶ್ಚರ್ಯ ಆಯಿತುಯಾಕೆಂದರೆ ಒಂದು ಸಣ್ಣ ಪಕ್ಷಿಗೆ ಕಬ್ಬಿಣದ ತಂತಿ ಎತ್ತಿಕೊಂಡು  ಅತಿ ಎತ್ತರಕ್ಕೆ ಹಾರಲು  ಮತ್ತು  ತಂತಿಯನ್ನು ಬಾಗಿಸಿ ಗೂಡು ಕಟ್ಟಲು ತುಂಬಾನೇ ಕಷ್ಟಆದರೂ  ಪಕ್ಷಿ  ಕಾಂಕ್ರೀಟ್ ಜಗತ್ತಿನಲ್ಲಿ ಸೋಲು ಒಪ್ಪಿಕೊಳ್ಳದೆಸ್ವಾವಲಂಬಿಯಾಗಿ , ಸ್ವ- ನಂಬಿಕೆಯಿಂದ , ಕಷ್ಟಕರವಾದ ಹೊಸ ಜೀವನ ಶೈಲಿಗೆ ಹೊಂದಿಕೊಂಡಿದ್ದು ವಿಶೇಷವೇ  ಸರಿಆದರೆ ಮನುಷ್ಯರಾದ  ನಾವು ನಿಜವಾಗಿಯೂ  ಪಕ್ಷಿಯ ರೀತಿ ಸ್ವಾವಲಂಬಿಯಾಗಿ , ಅದೇ ಹುಮ್ಮಸ್ಸಿನಿಂದ  ಬದುಕುತಿದ್ದೆವಾ?. ಇಲ್ಲ ಸಣ್ಣ ಪಕ್ಷಿಯಿಂದ ಮನುಷ್ಯರಾದ ನಮಗೆ ಕಲಿಯಲು ಮತ್ತು ಪ್ರೇರಣೆ ಪಡೆಯಲು ತುಂಬಾನೇ ಇದೆ ಅಲ್ಲವೇ ! .

ಆಧುನಿಕ ಯುಗದಲ್ಲಿ  ಬದಲಾವಣೆಗಳು ಸಹಜ, ಆದರೆ ರಾಜಕೀಯ ಮೋಸದಾಟ, ಬೌಗೋಳಿಕ ಅಸಮತೋಲನ, ಕೊರೊನ ಎಂಬ  ಮಹಾಮಾರಿಯಯಿಂ ದೇಶವು ಕಂಗೆಟ್ಟಿರುವಾಗ ,ದೇಶದ ಜೊತೆ ಜನರ ಜೀವನದ  ಹಳಿ ತಪ್ಪಿ ಹೋಗಿದೆ. ರಾಜಕೀಯ ಮೋಸದಾಟದಿಂದ ದೇಶದ ಆರ್ಥಿಕತೆ ಮಲಗಿದ ಮೇಲೆ ಹಲವಾರು ತಮ್ಮ ವ್ಯವಹಾರ, ಕೆಲಸ ಕಳೆದು ಕೊಂಡು, ಹಲವಾರು ಕೊರೊನ ಜೊತೆ ಹೋರಾಡುತ್ತ, ಹಲವಾರು ಬೌಗೋಳಿಕ ಏರುಪೆರಿಂದ ಮನೆ ಮಠ  ಕಳೆದು ಕಂಗಾಲಾಗಿ, ಜೀವನವೇ ಬೇಡ ಎಂದು ಕೈ ಬಿಟ್ಟಿರುವ ಮತ್ತು ನಮ್ಮ ಕೈಯಲ್ಲಿ ಏನು ಆಗಲ್ಲ ಎಂದು ಜೀವನವನ್ನು ಕೊನೆಗೊಳಿಸುವ  ನಾವು ಒಂದು ಸಲ ಪಕ್ಷಿಯ ತರ ಯಾಕೆ ಯೋಚಿಸಬಾರದು? ಯಾಕೆ ಒಂದು ಸಲ ಅದೇ ಹಳೆ ಹುಮ್ಮಸಿನಿಂದ, ತಮ್ಮಕೌಶಲ್ಯ ನಂಬಿಕೆಯಿಂದ, ಸ್ವಾನಂಬಿಕೆಯಿಂದ, ಜನಪ್ರತಿನಿಧಿಗಳನ್ನೂ ಕಾಯದೆ, ತಮ್ಮ ಹೊಸದಾದ ಜೀವನ ಶುರು ಮಾಡಬಾರದು. ನಿಧಾನವಾಗಿ ಪಕ್ಷಿಯಾ  ಹಾಗೆ ಹೊಸ ಜೀವನ ಶೈಲಿಗೆ ಖಂಡಿತವಾಗಿ ನಾವು  ಹೊಂದಿಕೊಳ್ಳುತ್ತೇವೆ .    

"ಆತ್ಮ ನಂಬಿಕೆ ಮತ್ತು ಕಠಿಣ ಪರಿಶ್ರಮ ಯಾವಾಗಲೂ ನಿಮಗೆ ಯಶಸ್ಸನ್ನು ತರುತ್ತದೆ"